ಸಂಘ ಪರಿವಾರ ಮುಖಂಡ, ಹಿರಿಯ ಪತ್ರಕರ್ತ ಕಿದೂರು ಶಂಕರನಾರಾಯಣ ಭಟ್ ನಿಧನ
ಉಪ್ಪಳ: ಆರ್‌ಎಸ್‌ಎಸ್ ಹಿರಿಯ ಸ್ವಯಂಸೇವಕ, ಹೊಸದಿಗಂತ ಪತ್ರಿಕೆಯ ಕಾಸರಗೋಡು ಜಿಲ್ಲಾ ನಿವೃತ್ತ ವರದಿಗಾರ, ಹಿರಿಯ ಪತ್ರಕರ್ತ, ಕ್ಯಾಂಪ್ಕೋದ ಮಾಜಿ ನಿರ್ದೇಶಕ, ಕಳತ್ತೂರು ಬಳಿಯ ಮಾಳಿಗೆ ಮನೆ ನಿವಾಸಿ ಕಿದೂರು ಶಂಕರನಾರಾಯಣ ಭಟ್ (72) ಅಲ್ಪ ಕಾಲದ ಅಸೌಖ್ಯದಿಂದ ನಿಧನ ಹೊಂದಿದರು. ರಾಷ್ಟಿçÃಯ ಸ್ವಯಂಸೇವಕ ಸಂಘದಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಸಮಾಜ ಸೇವೆಯಲ್ಲಿ ತೊಡಗಿದ್ದರು. ಅಲ್ಲದೆ ಧಾರ್ಮಿಕ, ಸಾಮಾಜಿಕ, ಸಾಂಸ್ಕöÈತಿಕ ಹಾಗೂ ಸಹಕಾರಿ ರಂಗದ ಮಾರ್ಗದರ್ಶಕರಾಗಿದ್ದರು. ಸಹಕಾರ ಭಾರತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಕುಂಬಳೆ ಬಿಲ್ಡಿಂಗ್ ಕೋ-ಓಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಅಭಿವೃದ್ದಿಗೆ ನಿಸ್ವಾರ್ಥವಾಗಿ ದುಡಿದಿದ್ದರು. ಕಳತ್ತೂರು ಕ್ಷೀರೋತ್ಪಾದಕ ಸಹಕಾರಿ ಸಂಘ, ಕಾಸರಗೋಡು ಜಿಲ್ಲಾ ಅಗ್ರಿಕಲ್ಚರ್ ಮಾರ್ಕೆಟಿಂಗ್ ಸೊಸೈಟಿ ನೀರ್ಚಾಲು, ಪೆರಡಾಲ ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷರಾಗಿ ಸಂಸ್ಥೆಗಳ ಪ್ರಗತಿಗೆ ಅಹರ್ನಿಶಿ ಕಾರ್ಯ ನಿರ್ವಹಿಸಿದ್ದರು. ಕಾಸರಗೋಡು ಬಿಲ್ಡಿಂಗ್ ಸೊಸೈಟಿಯನ್ನು ಪುನರ್ ಸಂಘಟಿಸಲು ಪ್ರಯತ್ನಿಸಿದರು.
ಮೃತರು ಪತ್ನಿ ಕ್ಯಾಂಪ್ಕೋ ಮಾಜಿ ನಿರ್ದೇಶಕಿ, ಸಾಹಿತಿ ಕೃಷ್ಣವೇಣಿ ಕಿದೂರು, ಪುತ್ರಿ ಶ್ರುತಿ (ಯು.ಕೆ), ಪುತ್ರ ಪೃಥ್ವಿ ಅಭಿಲಾಷ್ ಶರ್ಮ (ಬೆಂಗಳೂರು), ಅಳಿಯ ಕಿರಣ್ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. ಕಿದೂರಿನ ನಿವಾಸದ ಬಳಿ ಅವರ ಅಂತ್ಯಕ್ರಿಯೆ ನಡೆಯಿತು. ಮನೆಗೆ ವಿವಿಧ ವಲಯಗಳ ಗಣ್ಯರು ಹಾಗೂ ಕಾರ್ಯಕರ್ತರು ಭೇಟಿ ನೀಡಿ ಅಂತಿಮನಮನ ಸಲ್ಲಿಸಿದರು. ಇಂದು ಸಂಜೆ 5 ಗಂಟೆಗೆ ಕುಂಬಳೆ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಸಂಸ್ಮರಣಾ ಸಭೆ ನಡೆಯಲಿದೆ.