ಸಂಚರಿಸುತ್ತಿದ್ದ ಸ್ಕೂಟರ್ ಬೆಂಕಿಗಾಹುತಿ

ಹೊಸದುರ್ಗ: ಸಂಚರಿಸುತ್ತಿದ್ದ ಸ್ಕೂಟರ್ ಉರಿದು ನಾಶಗೊಂಡಿದೆ. ಕಾಞಂಗಾಡ್ ಇಕ್ಬಾಲ್ ನಗರ ನಿವಾಸಿ  ನಿಯಾದ್‌ರ ಪೆಟ್ರೋಲ್ ಸ್ಕೂಟರ್ ಕೆಎಸ್‌ಟಿಪಿ ರೋಡ್‌ನ ಅದಿಞಾಲ್ ಕೋಯಿಪ್ಪಳ್ಳಿ ಹಾಗೂ ಮಾಣಿಕ್ಕೋತ್ ಮಧ್ಯೆ ನಿನ್ನೆ ರಾತ್ರಿ ಬೆಂಕಿಗಾಹುತಿಯಾಗಿದೆ. ನಿಯಾದ್ ಚಿತ್ತಾರಿಯಿಂದ ಮನೆಗೆ ಮರಳುತ್ತಿದ್ದರು. ಈ ಮಧ್ಯೆ ಸ್ಕೂಟರ್‌ಗೆ ಬೆಂಕಿ ಹತ್ತಿಕೊಂಡಿದೆ. ಬೆಂಕಿ ಉರಿಯುತ್ತಿರುವುದು ಗಮನಕ್ಕೆ ಬಂದು ತಕ್ಷಣ ನಿಲ್ಲಿಸಿದುದರಿಂದ ಅವರು ಅಪಾಯದಿಂದ ಪಾರಾಗಿದ್ದಾರೆ. ಸ್ಥಳೀಯರು ತಲುಪಿ ನೀರೆರೆದು ಬೆಂಕಿ ನಂದಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page