ಸಂತಾಪ ಸಭೆ
ಉಪ್ಪಳ: ಧಾರ್ಮಿಕ ಮುಖಂಡ ದಾಮೋದರ ಬೊಳ್ಳಾರ ನಿಧನಕ್ಕೆ ಯುವಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿಯಲ್ಲಿ ಸಂತಾಪ ಸೂಚಕ ಸಭೆ ನಿನ್ನೆ ಸಂಜೆ ನಡೆಯಿತು. ಗ್ರಂಥಾಲ ಯದ ಕಾರ್ಯದರ್ಶಿ ರವೀಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದರು. ಧನರಾಜ್ ಸ್ವಾಗತಿಸಿದರು. ತುಳು ಅಕಾಡೆಮಿ ಅಧ್ಯಕ್ಷರಾದ ಎ.ಆರ್,. ಜಯಾ ನಂದ, ಸ್ಟೇಟ್ ಲೈಬ್ರೆರಿ ಕೌನ್ಸಿಲ್ ಸದಸ್ಯ ಕೆ.ಎ. ಹುಸೈನ್, ಜಿಲ್ಲಾ ಕೌನ್ಸಿಲ್ ಸದಸ್ಯೆ ವನಿತಾ ಆರ್ ಶೆಟ್ಟಿ, ಮಂಗಲ್ಪಾಡಿ ಪಂಚಾಯತ್ ಸದಸ್ಯೆ ಸುಜಾತ ಯು. ಶೆಟ್ಟಿ,ಉಮೇಶ್ ಶೆಟ್ಟಿ ಮಾತನಾಡಿದರು.