ಸಂಸತ್ ಮೇಲೆ ದಾಳಿ ನಡೆಸುವುದಾಗಿ ಖಾಲಿಸ್ತಾನಿ ಉಗ್ರ ಪನ್ನುನ್ ಬೆದರಿಕೆ

ನವದೆಹಲಿ: ಡಿಸೆಂಬರ್ ೧೩ರಂದು ಅಥವಾ ಅದರ ಮೊದಲು ಭಾರತದ ಸಂಸತ್‌ನ ಮೇಲೆ ದಾಳಿ ನಡೆಸುವುದಾಗಿ ಖಾಲಿಸ್ತಾನಿ ಭಯೋತ್ಪಾದಕ ಗುರ್ಪತ್‌ವಂತ್ ಸಿಂಗ್ ಪನ್ನುನ್ ತನ್ನ ಬಿಲದಲ್ಲಿ ಅಡಗಿಕೊಂಡೇ ಮತ್ತೆ ಬೆದರಿಕೆಯೊಡ್ಡುವ ವೀಡಿಯೋ ಬಿಡುಗಡೆಮಾಡಿದ್ದಾನೆ.

೨೦೦೧ರಲ್ಲಿ ಸಂಸತ್ ಮೇಲೆ ದಾಳಿ ನಡೆಸಿದ ಭಯೋತ್ಪಾದಕ  ಅಫ್ಸಲ್ ಗುರುವಿನ ಪೋಸ್ಟರ್ ಒಳಗೊಂಡಿರುವ ವೀಡಿಯೋವನ್ನು ಪನ್ನುನ್ ಬಿಡುಗಡೆ ಮಾಡಿದ್ದು, ಅದರಲ್ಲಿ ‘ದೆಹಲಿ ಬನೇಗಾ ಖಾಲಿಸ್ತಾನ್’ ಎಂಬ ಶೀರ್ಷಿಕೆ ಹಾಕಲಾಗಿದೆ. ತನ್ನನ್ನು ಹತ್ಯೆಗೈಯ್ಯಲು ಭಾರತ ನಡೆಸಿದ ಸಂಚುಗಳೆಲ್ಲವೂ ವಿಫಲವಾಗಿದೆ. ಅಲ್ಲದೆ ಭಯೋ ತ್ಪಾದಕರು  ಸಂಸತ್  ಮೇಲೆ ದಾಳಿ ನಡೆಸಿ ಡಿಸೆಂಬರ್ ೧೩ಕ್ಕೆ ೨೨ ವರ್ಷಗಳಾಗುತ್ತಿವೆ. ಅದೇ ದಿನ ಅಥವಾ ಅದಕ್ಕೂ ಮೊದಲು ತಾನು ಭಾರತದ ಸಂಸತ್ ಮೇಲೆ ದಾಳಿ ನಡೆಸುವುದಾಗಿ ಈ ಉಗ್ರ ತನ್ನ ವೀಡಿಯೋದಲ್ಲಿ ಬೆದರಿಕೆಹಾಕಿದ್ದಾನೆ.

ಸಂಸತ್‌ನ ಚಳಿಗಾಲ ಅಧಿವೇಶನ ನಿನ್ನೆ ಆರಂಭಗೊಂಡಿರುವ ವೇಳೆಯಲ್ಲೇ ಪನ್ನೂನ್ ಈ ಬೆದರಿಕೆಯೊಡ್ಡಿರುವುದನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.

  ಭದ್ರತಾ ಏಜೆನ್ಸಿಗಳ ಪ್ರಕಾರ ಪಾಕಿಸ್ತಾನ ಗುಪ್ತಚರ ಸಂಸ್ಥೆಯಾದ ಐಎಸ್‌ಐನ ಕೆ-೨(ಕಾಶ್ಮೀರ-ಖಾಲಿಸ್ತಾನ್) ಭಾರತ ವಿರೋಧಿ ನಿರೂಪಣೆಯನ್ನು ಪ್ರಚಾರ ಮಾಡುವ ತಮ್ಮ ಕಾರ್ಯಸೂಚಿಯನ್ನು  ಮುಂದುವರಿಸಲು ಪನ್ನೂನ್‌ಗೆ ನಿರ್ದೇಶ ನೀಡಲಾಗಿದೆಯೆಂದು ಹೇಳಲಾಗಿದೆ.

ಪನ್ನೂನ್ ಭಾರತದಲ್ಲಿ ನಿಷೇಧಿಸಲ್ಪಟ್ಟಿರುವ ಅಮೆರಿಕಾ ಮೂಲದ ಸಿಖ್ ಫಾರ್ ಜಸ್ಟೀಸ್ (ಎಸ್.ಎಫ್.ಜೆ)ಯ ಮುಖ್ಯ ಸ್ಥನಾಗಿದ್ದಾನೆ. ಜೊತೆಗೆ ಭಾರತೀಯ ತನಿಖಾ ಸಂಸ್ಥೆಗಳಿಗೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಲಿಸ್ಟ್‌ನಲ್ಲಿ ಒಳಗೊಂಡಿರುವ ಭಯೋ ತ್ಪಾದಕನೂ ಆಗಿದ್ದಾನೆ. ಈತನನ್ನು ಹತ್ಯೆಗೈಯ್ಯುವ ಹಲವು ಯತ್ನಗಳು ಈ ಹಿಂದೆ ನಡೆದಿದ್ದರೂ ಅದೆಲ್ಲವೂ ವಿಫಲಗೊಂಡಿತ್ತು. ಅದರಿಂದಾಗಿ ಪ್ರಾಣಭಯ ಆವರಿಸುವ ಆತ ಈಗ  ತನ್ನ ಗುಪ್ತ ಅಡಗುತಾಣದ ಬಿಲದಲ್ಲೇ ಅಡಗಿಕೊಂಡೇ ಭಾರತ ವಿರುದ್ಧ ಇಂತಹ ಬೆದರಿಕೆಯ ವೀಡಿಯೋ ಗಳನ್ನು  ಹೊರ ತರುತ್ತಿದ್ದಾನೆ.

ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸ್ಫೋಟಿಸುವುದಾಗಿ ನ. ೧೯ರಂದು ಪನ್ನೂನ್ ಬೆದರಿಕೆಯೊ ಡ್ಡಿದ್ದನು. ಮಾತ್ರವಲ್ಲ ಹಮಾಸ್ ಉಗ್ರರು ನಡೆಸಿದಂತೆ ಭಾರತದಲ್ಲೂ ದಾಳಿ ನಡೆಸಲಾಗುವುದು.  ವಿಶ್ವಕಪ್ ಕ್ರಿಕೆಟ್ ನಡೆಯುತ್ತಿರುವ ವೇಳೆ ಅಹಮ ದಾಬಾದ್ ನ ನರೇಂದ್ರಮೋದಿ ಕ್ರೀಡಾಂಗಣವನ್ನೂ ಸ್ಫೋಟಿಸ ಲಾಗುವುದೆಂಬ ಬೆದರಿಕೆಯನ್ನೂ ಆತ ಒಡ್ಡಿದ್ದನು. ಆ ಬಗ್ಗೆ ದೆಹಲಿ ಮತ್ತು ಗುಜರಾತ್ ಪೊಲೀಸರು ಪನ್ನೂನ್ ವಿರುದ್ಧ ಪ್ರತ್ಯೇಕ   ಪ್ರಕರಣಗಳನ್ನು ದಾಖಲಿಸಿಕೊಂ ಡಿದ್ದರು. ಅದರ ಬೆನ್ನಲೇ ಆತ ಈ ಹೊಸ ಬೆದರಿಕೆಯೊಡ್ಡಿದ್ದಾನೆ. ಬೆದರಿಕೆ ಹಿನ್ನೆಲೆಯಲ್ಲಿ ಸಂಸತ್ ಭವನ ಮತ್ತು ಸುತ್ತಮುತ್ತ  ಹೈ-ಅಲರ್ಟ್ ಘೋಷಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page