ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್‌ರ ಸಹೋದರ ನಿಧನ

ಕೋಟ್ಟಯಂ: ಸಂಸದ ರಾಜ್ ಮೋಹನ್ ಉಣ್ಣಿತ್ತಾನ್‌ರ ಸಹೋದರ ಚಂದ್ರಮೋಹನ್ ಉಣ್ಣಿತ್ತಾನ್ ಹೃದಯ ಸಂಬಂಧವಾದ ಅಸೌಖ್ಯದ ಹಿನ್ನೆಲೆ ಯಲ್ಲಿ ಇಂದು ಬೆಳಿಗ್ಗೆ ತಿರುವನಂತಪುರ ಮೆಡಿಕಲ್ ಕಾಲೇಜಿನಲ್ಲಿ ನಿಧನ ಹೊಂದಿದರು. ಕೊಲ್ಲಂ ಕಾಂಪಿಯಿಲ್ ಮನೆಯ ಕುಟ್ಟನ್‌ಪಿಳ್ಳೆ- ಸರಸ್ವತಿ ಅಮ್ಮ ದಂಪತಿಯ ಹಿರಿಯ ಮಗನಾಗಿದ್ದಾರೆ. ಮೃತರು ಪತ್ನಿ ಶ್ರೀದೇವಿ, ಮಕ್ಕಳಾದ ದೀಪು, ದಿನೂಪ್, ಸೊಸೆಯಂದಿರಾದ ಲಕ್ಷ್ಮಿ, ಅನಘ, ಇತರ ಸಹೋದರರಾದ ವಿಜಯ ಮೋಹನ್ ಉಣ್ಣಿತ್ತಾನ್, ವಿಪಿನ್ ಮೋಹನ್ ಉಣ್ಣಿತ್ತಾನ್,  ಸಹೋದರಿಯರಾದ ರುಕ್ಮಿಣಿ ಅಮ್ಮ, ಶೀಲಾದೇವಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page