ಸಂಸ್ಕೃತ ಎಂ.ಎ ಪದವಿ ಸೀಮಾ ರಂಜಿತ್‌ಗೆ 13 ಚಿನ್ನದ ಪದಕದೊಂದಿಗೆ ಪ್ರಥಮ ರ‍್ಯಾಂಕ್
ಕಾಸರಗೋಡು: ಮೈಸೂರು ವಿವಿ ಮಾನಸಗಂಗೋತ್ರಿಯಲ್ಲಿ ಸಂಸ್ಕೃತ ಎಂಎ ಪದವಿಯಲ್ಲಿ ಪ್ರಥಮ ರ‍್ಯಾಂಕ್ ಪಡೆದು 13 ಚಿನ್ನದ ಪದಕ ಗಳಿಸಿದ ಕಾಞಂಗಾಡ್ ಕಾಯರ್ತಾಯ ಮನೆತನದ ಸೀಮಾ ರಂಜಿತ್ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಅಲಂಕಾರ ಶಾಸ್ತ್ರ, ನ್ಯಾಯಶಾಸ್ತ್ರ, ಅಸ್ತಪ್ರತಿ ಶಾಸ್ತ್ರ, ಸಾಂಖ್ಯಾ ಹಾಗೂ ಚಾರ್ವಾಕ ದರ್ಶನಗಳಲ್ಲಿ ವಿವಿ ಮಟ್ಟದಲ್ಲೇ ಅತೀ ಹೆಚ್ಚು ಅಂಕ ಗಳಿಸಿದ್ದಲ್ಲದೆ, ಜರ್ಮನ್ ಮತ್ತು ರಷ್ಯನ್ ಭಾಷಾ ಪರೀಕ್ಷೆಗಳಲ್ಲಿ ೧೦೦ ಶೇ. ಅಂಕ ಪಡೆದಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ಕಳಚೆ ಗ್ರಾಮದ ಶ್ಯಾಮ್ ಹೆಗಡೆ- ಶಿಲ್ಪಾ ಹೆಗಡೆ ಪುತ್ರಿಯಾಗಿ ರುವ ಇವರು ಕಾಞಂಗಾಡ್‌ನ ರಂಜಿತ್‌ರ ಪತ್ನಿಯಾಗಿದ್ದಾರೆ.