ಸಚಿವೆ ವೀಣಾ ಜೋರ್ಜ್ ನಾಳೆ ಕಾಸರಗೋಡಿಗೆ
ಕಾಸರಗೋಡು: ರಾಜ್ಯ ಆರೋಗ್ಯ ಖಾತೆ ಸಚಿವೆ ವೀಣಾ ಜೋರ್ಜ್ ಅವರು ನಾಳೆ ಕಾಸರಗೋಡಿಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವರು. ಇದರಂತೆ ನಾಳೆ ಬೆಳಿಗ್ಗೆ ೮ ಗಂಟೆಗೆ ಸಚಿವೆ ಮಂಗಲ್ಪಾಡಿ ತಾಲೂಕು ಆಸ್ಪತ್ರೆ, ೯ಕ್ಕೆ ಕಾಸರಗೋಡು ಜನರಲ್ ಆಸ್ಪತ್ರೆ, ೯.೪೫ಕ್ಕೆ ಬೇಡಡ್ಕ ತಾಲೂಕು ಆಸ್ಪತ್ರೆ, ೧೧ಕ್ಕೆ ಕಳ್ಳಾರ್ ಪೂಡಂಕಲ್ಲಿನಲ್ಲಿರುವ ವೆಳ್ಳರಿಕುಂಡ್ ತಾಲೂಕು ಆಸ್ಪತ್ರೆ ಮತ್ತು ಮಧ್ಯಾಹ್ನ ೧೨.೧೫ಕ್ಕೆ ಹೊಸದುರ್ಗದಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಸಂದರ್ಶಿಸುವರು.
ಮಧ್ಯಾಹ್ನ ೧.೩೦ಕ್ಕೆ ಹೊಸದುರ್ಗ ಮಿನಿ ಸಿವಿಲ್ ಸ್ಪೇಷನ್ನಲ್ಲಿ ನಡೆಯುವ ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ಅವ ಲೋಕನಾ ಸಭೆಯಲ್ಲೂ ಸಚಿವೆ ಭಾಗವಹಿ ಸುವರು. ಆ ಬಳಿಕ ಅಪರಾಹ್ನ ೩.೩೦ಕ್ಕೆ ನೀಲೇಶ್ವರ ತಾಲೂಕು ಆಸ್ಪತ್ರೆ, ಅನಂತರ ಸಂಜೆ ೪.೧೫ಕ್ಕೆ ತೃಕ್ಕರಿಪುರ ತಾಲೂಕು ಆಸ್ಪತ್ರೆಗೂ ಸಚಿವರು ಸಂದರ್ಶಿಸುವರು.