ಸಪ್ಲೈ ಕೋ ಮೂಲಕ ವಿತರಿಸಲಾಗುವ ಸಾಮಗ್ರಿಗಳ ಬೆಲೆ ಏರಿಕೆ ಸಾಧ್ಯತೆ

ಕಾಸರಗೋಡು: ರಾಜ್ಯ ನಾಗರಿಕಾ ಪೂರೈಕೆ ಇಲಾಖೆಯ ಸಪ್ಲೈ ಕೋ ಕೇಂದ್ರಗಳ ಮೂಲಕ ಸಬ್ಸಿಡಿ ಆಧಾರ ದಲ್ಲಿ ಮಾರಾಟ ಮಾಡಲಾಗುತ್ತಿರುವ ೧೩ ಸಾಮಗ್ರಿಗಳ ಬೆಲೆ ಏರಿಸುವಂತೆ ಸಪ್ಲೈ ಕೋ ರಾಜ್ಯ  ಸರಕಾರದೊಂದಿಗೆ ಆಗ್ರಹಪಟ್ಟಿದೆ.

ಮಾತ್ರವಲ್ಲ ಶೇ. ೨೦ರಿಂದ ೩೦ರ ತನಕ ಕಡಿತದರದಲ್ಲಿ ಮಾರಾಟ ಮಾಡಲಾಗುತ್ತಿರುವ ಇತರ ೨೮ ಸಾಮಗ್ರಿಗಳ ಬೆಲೆಯನ್ನು ಹೆಚ್ಚಿಸಬೇ ಕೆಂದು ಸಪ್ಲೈಕೋ ಕೇಳಿಕೊಂಡಿದೆ.

ಸಪ್ಲೈ ಕೋ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ. ಇದರಿಂದ ಪಾರಾಗಲು ತುರ್ತಾಗಿ ೫೦೦ ಕೋಟಿ ರೂ. ಮಂಜೂರು ಮಾಡಬೇಕು. ಸಾರ್ವಜನಿಕ ಮಾರುಕಟ್ಟೆಗಳಲ್ಲಿ ಬೆಲೆ ನಿಯಂತ್ರಿಸಲು ಕಳೆದ ೧೧ ವರ್ಷ ಗಳಿಂದ ನಡೆಸಲಾದ ಮಧ್ಯಪ್ರವೇಶದಿಂ ದಾಗಿ ಸಪ್ಲೈಕೋಗೆ ಸರಕಾರದಿಂದ ೧೫೭೪.೩೪ ಕೋಟಿ ರೂ. ಲಭಿಸಲು ಬಾಕಿ ಇದೆ. ಇದರ ಹೊರತಾಗಿ ಕೋವಿಡ್ ಕಾಲದಲ್ಲಿ ರಿಯಾಯಿತಿ ದರದಲ್ಲಿ ವಿತರಿಸಲಾದ ಸಾಮಗ್ರಿಗಳ ವತಿಯಿಂದಲೂ ಸರಕಾರದಿಂದ ಲಭಿಸಲು ಬಾಕಿ ಇದೆ. ರಾಜ್ಯ ಬಜೆಟ್‌ನಲ್ಲಿ ಸಪ್ಲೈಕೋಗಾಗಿ ೧೯೦.೮೦ ಕೋಟಿ ರೂ. ಮೀಸಲಿರಿಸಲಾಗಿದ್ದರೂ ಅದರಲ್ಲಿ ೧೪೦ ಕೋಟಿ ರೂ. ಮಾತ್ರವೇ ಲಭಿಸಿದೆ ಎಂದು ಸಪ್ಲೈಕೋ ತಿಳಿಸಿದೆ.

ಸಪ್ಲೈಕೋಗೆ ಅಗತ್ಯದ ಸಾಮಗ್ರಿಗಳನ್ನು ಪೂರೈಸುತ್ತಿರುವ ಸಂಸ್ಥೆಗಳಿಗೆ ೬೦೦ ಕೋಟಿ ರೂ. ನೀಡಲು ಬಾಕಿ ಇಗದೆ. ಈ ಹಣ ನೀಡದ ಹೆಸರಲ್ಲಿ ಕೆಲವು ಸಂಸ್ಥೆಗಳು  ಸಪ್ಲೈಕೋಗೆ ಸಾಮಗ್ರಿಗಳ ಪೂರೈಕೆ ನಿಲುಗಡೆ ಗೊಳಿಸುವ ತೀರ್ಮಾನ ಕೈಗೊಂಡಿದೆ.

ಸಪ್ಲೈಕೋ ರಾಜ್ಯ ದಾದ್ಯಂತವಾಗಿ ೧೫೦೦ದಷ್ಟು ಮಾರಾಟ ಕೇಂದ್ರಗಳನ್ನು ಹೊಂದಿವೆ. ಆದರೆ ಇದರಲ್ಲಿ ಹೆಚ್ಚಿನ ಕೇಂದ್ರಗಳಲ್ಲಿ ಅಗತ್ಯದಷ್ಟು ಸಾಮಗ್ರಿಗಳ ದಾಸ್ತಾನು ಈಗಿಲ್ಲ. ಸಬ್ಸಿಡಿ ದರದಲ್ಲಿ ಸಾಮಗ್ರಿಗಳು ಲಭಿಸಿದಲ್ಲಿ ಮಾತ್ರವೇ ಜನರು ಸಪ್ಲೈಕೋಗೆ ಖರೀದಿಗಾಗಿ ಆಗಮಿಸುತ್ತಾರೆ ಎಂದು ಸಂಬಂಧಪಟ್ಟವರು ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *

You cannot copy content of this page