ಸಮುದ್ರದಲ್ಲಿ ಸ್ನಾನಕ್ಕಿಳಿದು ಅಲೆಗಳ ಸೆಳೆತಕ್ಕೊಳಗಾದ ೨೦ರಷ್ಟು ಮಕ್ಕಳು:  ಮೀನು ಕಾರ್ಮಿಕರ ಪ್ರಯತ್ನದಿಂದ ಅಪಾಯದಿಂದ ರಕ್ಷಣೆ

ಕಾಸರಗೋಡು: ಕಾಸರಗೋಡು ಕಡಪ್ಪುರದಲ್ಲಿ ಸ್ನಾನಕ್ಕಿಳಿದ ಇಪ್ಪತ್ತರಷ್ಟು ಮಕ್ಕಳು ಭಾರೀ ಅಲೆಗೆ ಸಿಲುಕಿ ಆಳ ಸಮುದ್ರದತ್ತ ಒಯ್ಯಲ್ಪಟ್ಟಿದ್ದು, ವಿಷಯ ತಿಳಿದು ಮೀನು ಕಾರ್ಮಿಕರು ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಿಂದ ಮಕ್ಕಳನ್ನು ಅಪಾಯದಿಂದ ರಕ್ಷಿಸಲಾಗಿದೆ.

ಇಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಕಾಸರಗೋಡು ಕಡಪ್ಪುರ ಬಳಿ ಅಯ್ಯಪ್ಪ ದೀಪೋತ್ಸವಕ್ಕೆಂದು ತಲುಪಿದ ೧೨,೧೩,೧೪ರ ಹರೆಯದ ಸುಮಾರು ೨೦ರಷ್ಟು ಮಕ್ಕಳು ಇಂದು ಬೆಳಿಗ್ಗೆ ಸಮುದ್ರ ಕಿನಾರೆಗೆ ತಲುಪಿದ್ದಾರೆ. ಬಳಿಕ  ಮೀನು ಕಾರ್ಮಿಕರು ಬಳಸುವ ಕ್ಯಾನ್‌ಗಳನ್ನು ದೇಹಕ್ಕೆ ಕಟ್ಟಿ ಇವರು ಸಮುದ್ರಕ್ಕಿಳಿದಿದ್ದರು. ಆದರೆ ಅದೇ ಹೊತ್ತಿನಲ್ಲಿ  ಅಪ್ಪಳಿಸಿದ ಬಲವಾದ ಅಲೆ ಮಕ್ಕಳನ್ನು ಎಳೆದೊಯ್ದಿದೆ.  ಮಕ್ಕಳು ಸಮುದ್ರದಲ್ಲಿ ಮುಳುಗೇಳುತ್ತಿರುವುದನ್ನು ಕಂಡ ಮೀನು ಕಾರ್ಮಿಕರಾದ  ಬಾಬು, ಪುಷ್ಪಾಕರನ್,  ಚಿತ್ರಕಾರನ್, ಹರೀಶ್ ಎಂಬಿವರು ತಕ್ಷಣ ಸಮುದ್ರಕ್ಕೆ ಹಾರಿ ಹರಸಾಹಸದಿಂದ ಮಕ್ಕಳನ್ನು ದಡಕ್ಕೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಮಕ್ಕಳು ಭಾರೀ ಅಪಾಯದಿಂದ ಪಾರಾಗಿದ್ದಾರೆ. ಮಕ್ಕಳು ಸಮುದ್ರದಲ್ಲಿ ಸಿಲುಕಿಕೊಂಡ ಬಗ್ಗೆ ತಿಳಿದು ಪೊಲೀಸ್, ಅಗ್ನಿಶಾಮಕದಳ ಹಾಗೂ ಹಲವು ಮಂದಿ ಸಮುದ್ರ ಸಮೀಪಕ್ಕೆ ತಲುಪಿದ್ದರು.

Leave a Reply

Your email address will not be published. Required fields are marked *

You cannot copy content of this page