ಸರಕಾರಿ ಜಮೀನನ್ನು ಅಕ್ರಮವಾಗಿ ಕೈವಶವಿರಿಸಿ ನಿರ್ಮಿಸಲಾದ ಆರಾಧನಾಲಯಗಳನ್ನು ಕೆಡವಬೇಕು-ಹೈಕೋರ್ಟ್
ಕೊಚ್ಚಿ: ಸರಕಾರಿ ಜಮೀನನ್ನು ಅಕ್ರಮವಾಗಿ ಕೈವಶವಿರಿಸಿಕೊಂಡು ಅಲ್ಲಿ ನಿರ್ಮಿಸಲಾದ ಆರಾಧನಾಲ ಯಗಳನ್ನು ಕೆಡವಬೇಕೆಂದು ಕೇರಳ ಹೈಕೋರ್ಟ್ ಆದೇಶ ನೀಡಿದೆ. ಹೈಕೋರ್ಟ್ನ ನ್ಯಾಯಮೂರ್ತಿ ಪಿ.ಎ. ಕುಂಞಿಕೃಷ್ಣನ್ ನೀಡಿದ ತೀರ್ಪಿನಲ್ಲಿ ಇದನ್ನು ಸ್ಪಷ್ಟಪಡಿ ಸಲಾಗಿದೆ.
ಸರಕಾರಿ ಜಾಗದಲ್ಲಿ ಅನಧಿಕೃ ತವಾಗಿ ನಿರ್ಮಾಣಗೊಂಡಿದ್ದಲ್ಲಿ ಆ ಬಗ್ಗೆ ತನಿಖೆ ನಡೆಸಿ ಅವುಗಳನ್ನು ಅಲ್ಲಿಂದ ತೆರವು ಗೊಳಿಸಲು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಅಗತ್ಯದ ಕ್ರಮ ಕೈಗೊಳ್ಳಬೇಕು. ಸರಕಾರಿ ಭೂಮಿಯಲ್ಲಿ ಮತೀಯ ಪರವಾದ ಯಾವುದನ್ನಾ ದರೂ ಸ್ಥಾಪಿಸಲಾಗಿದೆಯೇ ಎಂಬುವು ದನ್ನು ಸಂಬಂಧಪಟ್ಟ ತಹಶೀಲ್ದಾರ್ ಮತ್ತ್ತು ಗ್ರಾಮಾಧಿಕಾರಿ ಮೂಲಕ ಪರಿಶೀಲನೆ ನಡೆಸಿ ಅದರ ಆಧಾರದಲ್ಲಿ ಸಂಬಂ ಧಪಟ್ಟ ಜಿಲ್ಲಾಧಿಕಾರಿಗಳು ಅಗತ್ಯದ ಕ್ರಮ ಕೈಗೊಳ್ಳಬೇಕು.
ಇಂತಹ ಕ್ರಮಗಳನ್ನು ಮುಂದಿನ ಆರು ತಿಂಗಳೊಳಗಾಗಿ ಪೂರ್ತೀಕರಿಸ ಬೇಕು. ನಂತರ ಒಂದು ವರ್ಷದೊಳ ಗಾಗಿ ಆ ವರದಿಯನ್ನು ರಿಜಿಸ್ಟ್ರಾರ್ ಜನರಲ್ರಿಗೆ ಸಲ್ಲಿಸಬೇಕೆಂದೂ ಹೈಕೋರ್ಟ್ ತಿಳಿಸಿದೆ. ನಂಬುಗೆಯ ಆಧಾರದ ಹೆಸರಲ್ಲಿ ಯಾರೂ ಸರಕಾರಿ ಭೂಮಿ ಕೈವಶಪಡಿಸುವ ಹಾಗಿಲ್ಲ. ಎಲ್ಲಾ ಧರ್ಮೀಯರೂ ಇಂತಹ ಯತ್ನದಲ್ಲಿ ತೊಡಗಿದ್ದಲ್ಲಿ ಅದು ಘರ್ಷಣೆಗಳಿಗೆ ದಾರಿ ಮಾಡಿಕೊಡಲಿದೆ. ಭಾರತೀಯ ಸಂವಿಧಾನ ಎಲ್ಲರಿಗೂ ಧಾರ್ಮಿಕ ಸ್ವಾತಂತ್ರ ನೀಡುತ್ತಿದೆ. ಅಂದಮಾತ್ರಕ್ಕೆ ಸರಕಾರಿ ಭೂಮಿಯನ್ನು ಅಕ್ರಮವಾಗಿ ಕೈವಶಪಡಿಸುವುದನ್ನು ಸುತರಾಂ ಅಂಗೀಕರಿಸುವಂತಿಲ್ಲ.
ಹೀಗೆ ಸರಕಾರಿ ಭೂಮಿಯನ್ನು ಅಕ್ರಮವಾಗಿ ಕೈವಶಪಡಿಸುವ ಯತ್ನಗಳಿಗೆ ಭೂ ಸಂರಕ್ಷಣಾ ಕಾನೂ ನುಪ್ರಕಾರ ನಿಷೇಧ ಹೇರಬೇಕೆಂದೂ ನ್ಯಾಯಾಲಯ ಆದೇಶ ನೀಡಿದೆ.