ಸರದಿಯಲ್ಲಿ ನಿಂತು ಮತದಾನಗೈದ ಜಿಲ್ಲಾಧಿಕಾರಿ
ಕಾಸರಗೋಡು: ನಾಗರಿಕ ಪ್ರಜ್ಞೆಯ ಮಾದರಿ ತೋರಿಸಿದ ಜಿಲ್ಲಾಧಿಕಾರಿ ಕೆ. ಇಂಬಶೇಖರ್. ಕಾಸರಗೋಡು ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ನಿನ್ನೆ ಮಧ್ಯಾಹ್ನ 1.15ರ ವೇಳೆ ನಾಯಮ್ಮಾರ್ ಮೂಲೆ ತನ್ಬೀಹುಲ್ ಇಸ್ಲಾಂ ಹೈಯರ್ ಸೆಕೆಂಡರಿ ಶಾಲೆಗೆ ತಲುಪಿ ಮತದಾನಗೈದರು. ಶಾಲೆಯ 102ನೇ ಮತಗಟ್ಟೆಗೆ ತಲುಪಿದ ಇವರು ಸರದಿ ಸಾಲಲ್ಲಿ ನಿಂತು ಮತದಾನ ದಾಖಲಿಸಿದರು. ತಮಿಳುನಾಡು ಪುದುಕೋಟೆ ನೀಲಗಿರಿ ಜಿಲ್ಲೆಯ ಪಂದಲ್ಲೂರು ನಿವಾಸಿಯಾದ ಇಂಬಶೇಖರ್ 2023 ಮೇ ತಿಂಗಳಲ್ಲಿ ಕಾಸರ ಗೋಡು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಬಳಿಕ ಇವರು ತನ್ನ ಹೆಸರನ್ನು ಕಾಸರಗೋಡು ಲೋಕಸಭಾ ಕ್ಷೇತ್ರಕ್ಕೆ ಬದಲಾಯಿಸಿದ್ದರು.