ಕಾಸರಗೋಡು: ಸೈನಿಕ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಶಾಸಕ ಎನ್.ಎ.ನೆಲ್ಲಿಕುನ್ನ್ ನೆರವೇರಿಸಿದರು. ದೇಶಸೇವೆಗಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಸೈನಿಕರೇ ನಿಜವಾದ ದೇಶಭಕ್ತರು ಎಂದು ಶಾಸಕರು ಹೇಳಿದರು. ಸೇನೆಯಿಂದ ನಿವೃತ್ತಿ ಹೊಂದಿದ ನಂತರ ವಿಶ್ರಾಂತಿ ಜೀವನ ನಡೆಸುವವರು ಹೆಚ್ಚಿನ ಗೌರವ ಮತ್ತು ಕಾಳಜಿಗೆ ಅರ್ಹರಾಗಿದ್ದು ಅವರನ್ನು ಸಮಾಜ ಜೊತೆಗೂಡಿಸಬೇಕೆಂದು ಶಾಸಕರು ಹೇಳಿದರು. ಜಿಲ್ಲಾಧಿಕಾರಿಗಳ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎ.ಡಿ.ಎಂ ಕೆ.ನವೀನ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಹುತಾತ್ಮರಾದ ವೀರ ಯೋಧರ ಸ್ಮರಣಾರ್ಥ ಯುದ್ಧ ಸ್ಮಾರಕಕ್ಕೆ ಶಾಸಕರ ನೇತೃತ್ವದಲ್ಲಿ ಪುಷ್ಪಾರ್ಚನೆ ಮಾಡಲಾಯಿತು. ಜಿಲ್ಲಾ ಸೇನಾ ಮಂಡಳಿ ಸದಸ್ಯ ನಿವೃತ್ತ ಸ್ಕ್ವಾಡ್ ಲೀಡರ್ ಕೆ.ನಾರಾಯಣನ್ ನಾಯರ್ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಸಂದೇಶ ನೀಡಿದರು. ಕ್ಯಾಪ್ಟನ್ ಮೋಹನನ್ ನಾಯರ್, ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂಧನ್, ಕೆ.ಪಿ.ರಾಜನ್ ಎಂಬಿವರು ಮಾತನಾಡಿದರು. ಎನ್.ಸಿ.ಸಿ ಕೆಡೆಟïಗಳು ಭಾಗವಹಿಸಿದ್ದರು. ಜಿಲ್ಲಾ ಸೈನಿಕ ಕಲ್ಯಾಣಾಧಿಕಾರಿ ಇನ್ ಚಾರ್ಜ್ ಕೆ.ಕೆ.ಶಾಜಿ ಸ್ವಾಗತಿಸಿ, ಎಂ.ಪವಿತ್ರನ್ ವಂದಿಸಿದರು. ಜಾಗೃತಿ ಸೆಮಿನಾರ್ ಹಾಗೂ ಸಂಶಯ ನಿವಾರಣೆಗಾಗಿ ಜಿಲ್ಲಾ ಸೈನಿಕ ಕಲ್ಯಾಣ ಕಚೇರಿಯ ಎ.ವಿ.ಬಾಬು, ಪಿ.ಕೆ.ರೂಪೇಶ್ ಕುಮಾರ್ ಎಂಬಿವರು ನೇತೃತ್ವ ವಹಿಸಿದ್ದರು.







