ಸಾಮೂಹಿಕ ಹತ್ಯೆ: ಅಫಾನ್‌ನ ತಾಯಿಯ ಆರೋಗ್ಯದಲ್ಲಿ ಚೇತರಿಕೆ; ಇಂದು ಹೇಳಿಕೆ ದಾಖಲು
ತಿರುವನಂತಪುರ: ವೆಂಞಾರ ಮೂಡ್ ಸಾಮೂಹಿಕ ಹತ್ಯೆ ಪ್ರಕರಣದಲ್ಲಿ ಆರೋಪಿ ಅಫಾನ್‌ನ ತಾಯಿ ಶಮೀನಾರ ಹೇಳಿಕೆಯನ್ನು ಇಂದು ದಾಖಲಿಸಲಾಗುವುದು. ಆರೋಪಿಯ ಆಕ್ರಮಣದಿಂದ ಗಂಭೀರ ಗಾಯಗೊಂಡ ಶಮೀನ ತಿರು ವನಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದಾರೆ. ಆರೋಗ್ಯ ಸ್ಥಿತಿ ಉತ್ತಮಗೊಂಡ ಹಿನ್ನೆಲೆಯಲ್ಲಿ ಇಂದು ಅವರಿಂದ ಹೇಳಿಕೆ ದಾಖಲಿ ಸಲು ಡಾಕ್ಟರ್‌ಗಳು ಪೊಲೀಸರಿಗೆ ಒಪ್ಪಿಗೆ ನೀಡಿದ್ದಾರೆ. ಕುಟುಂಬದ ಆರ್ಥಿಕ ಸಂದಿಗ್ಧತೆಯಿಂದ ಪಾರಾ ಗಲು ದಾರಿ ಕಾಣದ ಹಿನ್ನೆಲೆಯಲ್ಲಿ ಸಾಮೂಹಿಕ ಕೊಲೆ ನಡೆಸಬೇಕಾಗಿ ಬಂತೆಂದು ಅಫಾನ್ ಪೊಲೀಸರಲ್ಲಿ ಹೇಳಿಕೆ ನೀಡಿದ್ದಾನೆ. ಇದೇ ವೇಳೆ ಕೊಲೆಗೆ ಕಾರಣ ಇದೇ ಆಗಿದೆಯೋ ಎಂಬ ಬಗ್ಗೆ ಪೊಲೀಸ್ ತಂಡ ತನಿಖೆ ನಡೆಸುತ್ತಿದೆ. ಅಫಾನ್‌ರ ತಾಯಿ ಶಮೀನಾರಿಗೆ 65 ಲಕ್ಷ ರೂ.ಗಳ ಸಾಲವಿದೆಯೆಂದು ಮಾಹಿತಿಯಿದೆ. ಪ್ರಿಯತಮೆ ಫರ್ಸಾನಳ ಸರವನ್ನು ಅಫಾನ್ ಅಡವಿರಿಸಿ, ಅದರ ಬದಲಿಗೆ ನಕಲಿ ಚಿನ್ನಾಭರಣ ನೀಡಿದ್ದನು. ಈ ಸರವನ್ನು ಬಿಡಿಸಿ ನೀಡಬೇಕೆಂದು ಫರ್ಸಾನಾ ಇತ್ತೀಚೆಗೆ ಬೇಡಿಕೆ ಒಡ್ಡಿದ್ದಳೆಂದು ಪೊಲೀಸರು ತಿಳಿಸುತ್ತಾರೆ. ತಾಯಿಗೆ ಆಕ್ರಮಣಗೈದ ಬಳಿಕ ಅಫಾನ್ ನೇರವಾಗಿ ಪಾಂಙೋಟ್ ನಲ್ಲಿರುವ ಅಜ್ಜಿಯ ಮನೆಗೆ ತೆರಳಿದ್ದಾನೆ. ಮನೆಗೆ ತಲುಪಿದ ಕೂಡಲೇ ನಿಮಿಷಗಳೊಳಗೆ ಸಲ್ಮಾ ಬೀವಿಯನ್ನು ಕೊಲೆಗೈದು ಅವರ ಸರವನ್ನು ತೆಗೆದುಕೊಂಡು ವೆಂಞಾರಮೂಡ್ ಜಂಕ್ಷನ್‌ಗೆ ಮರಳಿದ್ದಾನೆ. ಆ ಸರವನ್ನು ಖಾಸಗಿ ಹಣಕಾಸು ಸಂಸ್ಥೆಯಲ್ಲಿ ಅಡವಿರಿಸಿ 74,೦೦೦ ರೂ. ಪಡೆದುಕೊಂಡಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಇದರಿಂದ 4೦,೦೦೦ ರೂ. ಫೆಡರಲ್ ಬ್ಯಾಂಕ್‌ನ ತನ್ನ ಸ್ವಂತ ಖಾತೆ ಮೂಲಕ ಸಾಲ ತೀರಿಸಿದ್ದಾನೆ.
ಅದರ ಬಳಿಕ ಮುಂದಿನ ಕೊಲೆ ಕೃತ್ಯಗಳಿಗಾಗಿ ಎಸ್.ಎನ್ ಪುರದಲ್ಲಿರುವ ತಂದೆಯ ಸಹೋದರನ ಮನೆಗೆ ತಲುಪಿ ಹಣ ಆಗ್ರಹಿಸಿದ್ದು, ಬಳಿಕ ಚಿಕ್ಕಪ್ಪ ಹಾಗೂ ಚಿಕ್ಕಮ್ಮರನ್ನು ಕೊಲೆಗೈದನು. ನಿನ್ನೆ ರಾತ್ರಿ ಡಿವೈಎಸ್‌ಪಿ ಅಫಾನ್ ನಿಂದ ಹೇಳಿಕೆ ದಾಖಲಿಸಲು ಮೆಡಿ ಕಲ್ ಕಾಲೇಜಿಗೆ ತಲುಪಿದ್ದರಾದರೂ ಆತನ ಮಾನಸಿಕ ಸ್ಥಿತಿ ಸರಿಯಿಲ್ಲದ ಕಾರಣ ಹಿಂತಿರುಗಿದ್ದರು. ಇಂದು ಹೇಳಿಕೆ ದಾಖಲಿಸಲಿರುವ ಪ್ರಯತ್ನ ತನಿಖಾ ತಂಡ ನಡೆಸಲಿದೆ. ಇದೇ ವೇಳೆ ಅಫಾನ್ ಹಾಗೂ ಶಮೀನಾರ ಮೊಬೈಲ್ ಫೋನ್‌ಗಳನ್ನು ಫಾರೆನ್ಸಿಕ್ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಸೈಬರ್ ಸೆಲ್‌ನ ಸಹಾಯವನ್ನು ಪಡೆಯಲಾಗಿದೆ. ಸಾಮೂಹಿಕ ಆತ್ಮಹತ್ಯೆಗಿರುವ ದಾರಿಯನ್ನು ಗೂಗಲ್‌ನಲ್ಲಿ ಅಫಾನ್ ಸರ್ಚ್ ಮಾಡಿದ್ದನೆಂದು ನೀಡಿದ ಹೇಳಿಕೆಯನ್ನು ಖಾತ್ರಿಪಡಿಸಲು ಫಾರೆನ್ಸಿಕ್ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.