ಸಾಯಿವಿಘ್ನೇಶ್ ಕಾಸರಗೋಡಿಗೆ: ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆ ವಾರ್ಷಿಕೋತ್ಸವ 19ರಂದು
ಕಾಸರಗೋಡು: ಕಾಸರಗೋಡು ಶ್ರೀ ಗೋಪಾಲಕೃಷ್ಣ ಸಂಗೀತ ಶಾಲೆ ವಿದ್ಯಾನಗರ ಇದರ 28ನೇ ವಾರ್ಷಿಕೋತ್ಸವ ಈ ತಿಂಗಳ 19ರಂದು ಬೀರಂತಬೈಲು ಲಲಿತಕಲಾ ಸದನದಲ್ಲಿ ಜರಗಲಿದೆ. ಕಾಂತಾರಾ ಸಿನಿಮಾದ ವರಾಹರೂಪಂ ಖ್ಯಾತಿಯ ಸಾಯಿ ವಿಘ್ನೇಶ್‌ರಿಂದ ಅಂದು ಸಂಜೆ 4 ಗಂಟೆಗೆ ಸಂಗೀತ ಕಚೇರಿ ನಡೆಯಲಿದೆ. ವಿದ್ವಾನ್ ಕರೈಕಲ್ ವೆಂಕಟಸುಬ್ರಹ್ಮಣ್ಯನ್, ವಿದ್ವಾನ್ ಎಂ.ಎಸ್. ವೆಂಕಟಸುಬ್ರಹ್ಮಣ್ಯನ್, ವಿದ್ವಾನ್ ರಿಜು ಉಣ್ಣಿಕೃಷ್ಣನ್ ಪಾಲಕ್ಕಾಡ್ ಸಹಕರಿಸುವರು. ಅಂದು ಬೆಳಿಗ್ಗೆ 9.30ಕ್ಕೆ ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ದೀಪ ಪ್ರಜ್ವಲನೆಗೈದು ಉದ್ಘಾಟಿಸುವರು. ಬಳಿಕ ಸಂಗೀತಶಾಲೆಯ ವಿದುಷಿ ಉಷಾ ಈಶ್ವರ ಭಟ್ ಅವರ ಶಿಷ್ಯಂದಿರಿಂದ ಸಂಗೀತೋಪಾಸನೆ ನಡೆಯಲಿದೆ. ವಿದ್ವಾನ್ ಪ್ರಭಾಕರ ಕುಂಜಾರು, ವಿದ್ವಾನ್ ಬಾಲರಾಜ್ ಬೆದ್ರಡಿ, ಡಾ. ಮಯಾ ಮಲ್ಯ, ವಿದ್ವಾನ್ ಕೋವೈ ಕಣ್ಣನ್, ವಿದ್ವಾನ್ ರಾಜೀವ್ ಗೋಪಾಲ್, ವಿದ್ವಾನ್ ಶ್ರೀಧರ ಭಟ್ ಬಡಕ್ಕೇಕರೆ, ವಿದ್ವಾನ್ ಟಿ.ಕೆ. ವಾಸುದೇವ ಸಹಕರಿಸುವರು ಎಂದು ಸಂಗೀತಶಾಲೆಯ ಸಂಚಾಲಕ ವಿದ್ವಾನ್ ಬಿ.ಜಿ. ಈಶ್ವರ ಭಟ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.