ಸಾರ್ವಜನಿಕ ಬಾವಿಯಲ್ಲಿ ಯುವಕನ ಮೃತದೇಹ ಪತ್ತೆ

ಹೊಸದುರ್ಗ: ಕಾಞಂಗಾಡ್ ನಗರಸಭೆಯ ಅಧೀನದಲ್ಲಿರುವ ಸಾರ್ವಜನಿಕ ಬಾವಿಯಲ್ಲಿ ಯುವಕ ಮೃತಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಹಚ್ಚಲಾಗಿದೆ. ಅತ್ತಿಕ್ಕೋತ್ ಎಸಿ ನಗರದ ಬೀರನ್- ಕಾರ್ತ್ಯಾಯಿನಿ ದಂಪತಿ ಪುತ್ರ ಬೈಜು (೩೫)ರ ಮೃತದೇಹ ಬಾವಿಯಲ್ಲಿ ಪತ್ತೆಯಾಗಿದೆ. ಬಾವಿಯ ಬದಿಯಲ್ಲಿ ಲಭಿಸಿದ ಮೊಬೈಲ್ ಫೋನ್ ರಿಂಗುಣಿಸಿದ್ದು ಈ ಹಿನ್ನೆಲೆಯಲ್ಲಿ ನೋಡಿದಾಗ ಬಾವಿಯಲ್ಲಿ ಮೃತದೇಹ ಪತ್ತೆಯಾಗಿದೆ.  ಬಾವಿ ಬಳಿಯಲ್ಲೇ ಚಪ್ಪಲಿ ಕೂಡಾ ಪತ್ತೆಹಚ್ಚಲಾಗಿದೆ. ಮೃತದೇಹವನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ತಲುಪಿಸಿದ್ದಾರೆ. ನಿನ್ನೆ ರಾತ್ರಿ ೭ ಗಂಟೆಗೆ ಬೈಜು ಹಾಗೂ ಗೆಳೆಯರು ಈ ಬಾವಿ ಬಳಿ ಮಾತನಾ ಡುತ್ತಿದ್ದರೆನ್ನಲಾಗಿದೆ. ಬಳಿಕ ಗೆಳೆಯರು ಮನೆಗೆ ಹಿಂತಿರುಗಿದ್ದು, ಈ ವೇಳೆ ಬೈಜು ಮಾತ್ರವೇ ಅಲ್ಲಿ ಉಳಿದುಕೊಂಡಿದ್ದರೆನ್ನಲಾಗಿದೆ. ಆಯ ತಪ್ಪಿ ಬಾವಿಗೆ ಬಿದ್ದಿರಬೇಕೆಂದು ಸಂಬಂಧಿಕರು ತಿಳಿಸಿದ್ದಾರೆ.

ಮೃತರು ತಂದೆ, ತಾಯಿ, ಪತ್ನಿ ವಿಲಾಸಿನಿ, ಮಕ್ಕಳಾದ ಧ್ಯಾನ್, ನೀರಜ್, ಸಹೋದರರಾದ ಬಾಲನ್, ಬಾಬು, ಸಹೋದರಿ ಬಿಂದು ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

You cannot copy content of this page