ಸಾಲದ ಹೊರೆ: ಕುಟುಂಬದ ನಾಲ್ಕು ಮಂದಿ ನೇಣುಬಿಗಿದು ಸಾವು
ತೊಡುಪುಳ: ಇಡುಕ್ಕಿಯಲ್ಲಿ ಕುಟುಂಬವೊಂದರ ನಾಲ್ಕು ಮಂದಿ ಮನೆಯೊಳಗೆ ನೇಣು ಬಿಗಿದು ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ಉಪ್ಪುತ್ತರ ಒಂಬದೆಕ್ಕೆರೆಯಲ್ಲಿ ಘಟನೆ ನಡೆದಿದೆ. ಸಜೀವ್‌ಮೋಹನನ್ (34), ಪತ್ನಿ ರೇಷ್ಮಾ (30), ಪುತ್ರ ದೇವನ್ (5), ಪುತ್ರಿ ದಿಯಾ (3) ಎಂಬಿವರು ಮೃತಪಟ್ಟವರು. ಕೆಲಸ ಮುಗಿಸಿ ಸಜೀವ್‌ರ ತಾಯಿ ಬಂದು ನೋಡಿದಾಗ ಮನೆ ಬಾಗಿಲು ಹಾಕಿದ ಸ್ಥಿತಿಯಲ್ಲಿ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪರಿಶೀಲಿಸಿದಾಗ ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. ಚಾವಡಿಯಲ್ಲಿ ಮೃತದೇಹಗಳು ಕಂಡುಬಂದಿದೆ. ಉಪ್ಪುತ್ತರದಲ್ಲಿ ಆಟೋ ರಿಕ್ಷಾ ಚಾಲಕನಾಗಿದ್ದಾರೆ ಸಜೀವ್. ಸಾಲದ ಹೊರೆ ಹಿನ್ನೆಲೆ ಯಲ್ಲಿ ಆತ್ಮಹತ್ಯೆಗೈದಿರಬೇಕೆಂದು ಪೊಲೀಸರು ಶಂಕಿಸಿದ್ದಾರೆ. ತನಿಖೆ ನಡೆಸಲಾಗುತ್ತಿದೆ.