ಸಾಲವಾಗಿ ಪಡೆದ ಹಣ ಮರು ಪಾವತಿಗಾಗಿ ನೀಡಿದ ಚೆಕ್‌ಗಳು ಅಮಾನ್ಯ: ಆರೋಪಿಯ ಖುಲಾಸೆ

ಕಾಸರಗೋಡು: ಸಾಲವಾಗಿ ಪಡೆದ ಹಣದ ಮರು ಪಾವತಿ ಅಂಗವಾಗಿ ನೀಡಿದ ಎರಡು ಚೆಕ್‌ಗಳು ಅಮಾನ್ಯ ವಾಗಿತ್ತೆಂದು ಆರೋಪಿಸಿ ನೀಡಿದ ದೂರಿ ನಲ್ಲಿ ನ್ಯಾಯಾಲಯ ಆರೋಪಿಯನ್ನು ಖುಲಾಸೆಗೊಳಿಸಿ ತೀರ್ಪು ನೀಡಿದೆ.

ಬೇಕಲ ತಿರುವಕ್ಕೋಳಿ ಶ್ರೀ ಮಲ್ಲಿಕಾರ್ಜುನ ನಿಲಯದ ಲಿಂಗಪ್ಪಯ್ಯರ ಪುತ್ರ ವಿವೇಕ್ ಬೇಕಲ್ ಎಂಬವರು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಚೀಫ್ ಜುಡೀಶಿಯಲ್ ಪ್ರಥಮ ದರ್ಜೆ ಮೆಜಿಸ್ಟ್ರೇಟ್ ನ್ಯಾಯಾಲಯದಲ್ಲಿ ೨ನೇ ದರ್ಜೆ ಕ್ಲಾರ್ಕ್ ಆಗಿರುವ ರಾಜೇಂದ್ರ ಪ್ರಸಾದರ ಪತ್ನಿ ಸುರೇಖ ಗುಣಗಿ ಎಂಬವರಿಗೆ ವಿವಿಧ ಸಂದರ್ಭಗಳಲ್ಲಿ ಒಟ್ಟು ೧೨,೪೫,೦೦೦ ರೂಪಾಯಿಗಳನ್ನು ಸಾಲವಾಗಿ ನೀಡಿದ್ದರೆನ್ನಲಾಗಿದೆ. ಅದರ ಮರು ಪಾವತಿಗಾಗಿ ಸುರೇಖ ಗುಣಗಿ ರೂ. ೬,೨೦,೦೦೦ ಹಾಗೂ ರೂ. ೬,೨೫,೦೦೦ದ ಎರಡು ಚೆಕ್‌ಗಳನ್ನು ಕೊಟ್ಟಿದ್ದರು. ಅದನ್ನು ಬ್ಯಾಂಕ್‌ನಲ್ಲಿ ನೀಡಿದಾಗ ಅವು ಅಮಾನ್ಯ ಚೆಕ್‌ಗಳೆಂದು ತಿಳಿದು ಬಂದ ಹಿನ್ನೆಲೆಯಲ್ಲಿ ವಿವೇಕ್ ಬೇಕಲ್ ಕಾಸರಗೋಡು ಸಿ.ಜೆ.ಎಂ. ನ್ಯಾಯಾಲಯದಲ್ಲಿ ದೂರು ನೀಡಿದ್ದರು. ಈ ಬಗ್ಗೆ ನ್ಯಾಯಾಲಯದಲ್ಲಿ ನಡೆದ ವಾದ-ವಿವಾದವನ್ನು ಆಲಿಸಿದ ನ್ಯಾಯಾಧೀಶ ಎಂ.ಸಿ. ಅಂತೋನಿ ಯವರು ಪಿರ್ಯಾದಿದಾರರ ನ್ಯಾಯಯುತ ಸಾಲವನ್ನು ದೃಢೀಕರಿಸಲು ವಿಫಲರಾಗಿದ್ದಾರೆಂದು ತಿಳಿದು ಆರೋಪಿಯನ್ನು ಖುಲಾಸೆಗೊ ಳಿಸಿ ತೀರ್ಪು ನೀಡಿದ್ದಾರೆ.  ಆರೋಪಿ ಯ ಪರವಾಗಿ ನ್ಯಾಯವಾದಿ ತಲೆಕಾನ ರಾಧಾಕೃಷ್ಣ ಶೆಟ್ಟಿಯವರು ವಾದಿಸಿದ್ದರು.

Leave a Reply

Your email address will not be published. Required fields are marked *

You cannot copy content of this page