ಸಿಡಿಲಿನ ಆಘಾತ : ಶ್ರೀ ಕೊರಗಜ್ಜ ದೈವದ ಗುಡಿ, ಮನೆಗೆ ಹಾನಿ
ಬದಿಯಡ್ಕ: ಇಂದು ಮುಂಜಾನೆ ಉಂಟಾದ ಸಿಡಿಲಿನ ಆಘಾತದಿಂದ ಮನೆ ಹಾಗೂ ಶ್ರೀ ಕೊರಗಜ್ಜ ದೈವದ ಗುಡಿಗೆ ಹಾನಿಯುಂಟಾಗಿದೆ. ಬದಿಯಡ್ಕ ಬಳಿಯ ಕಾಡಮನೆ ಮುಚ್ಚಿರ್ ಕವೆ ಎಂಬಲ್ಲಿ ಈ ಘಟನೆ ನಡೆದಿದೆ. ಮುಚ್ಚಿರ್ ಕವೆಯ ಲ್ಲಿರುವ ಶ್ರೀ ಕೊರಗಜ್ಜ ದೈವದ ಗುಡಿಗೆ ಉಂಟಾದ ಸಿಡಿಲಿನ ಆಘಾತದಿಂದ ಅಡಿಪಾಯಕ್ಕೆ ಹಾನಿಯುಂಟಾಗಿದೆ. ಅಪ ಘಾತದ ಕಲ್ಲುಗಳು ಪುಡಿಯಾಗಿ ಸಮೀಪದಲ್ಲಿ ಹೊಂಡ ಸೃಷ್ಟಿಯಾಗಿದೆ. ಗುಡಿಯ ಸಮೀಪದಲ್ಲಿರುವ ಬಾಬು ಎಂಬವರ ಮನೆಗೂ ಸಿಡಿಲಿನ ಆಘಾತದಿಂದ ಹಾನಿಯುಂ ಟಾಗಿದೆ. ಮನೆಯ ವಯರಿಂಗ್, ಇಲೆಕ್ಟ್ರಾನಿಕ್ ಉಪಕರಣಗಳಿಗೆ ಹಾನಿ ಉಂಟಾಗಿದೆ.