ಸಿನಿಮಾ ವಿಲನ್ ಡ್ಯಾನಿಯಲ್ ಬಾಲಾಜಿ ನಿಧನ

|ಬೆಂಗಳೂರು: ಕನ್ನಡ ಚಿತ್ರರಂಗ ಸಹಿತ ಬಹು ಭಾಷಾ ನಟ ರಾಗಿ ಮಿಂಚು ತ್ತಿದ್ದ ನಟ ಡ್ಯಾನಿಯಲ್ ಬಾಲಾಜಿ (೪೮) ವಿಧಿವಶರಾಗಿದ್ದಾರೆ.

ಕನ್ನಡ ಮಾತ್ರವಲ್ಲ ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲೂ ನಟಿಸಿದ್ದ ಡ್ಯಾನಿಯಲ್ ಬಾಲಾಜಿ ನಿನ್ನೆ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆ ದರು. ಮೃತದೇಹವನ್ನು ಇಂದು ಪುರಸ್ಸೆವಾಲಂನಲ್ಲಿ ಸಾರ್ವಜನಿಕ ದರ್ನಕ್ಕೆ ಇರಿಸಲಾಗುವುದು.

ಡ್ಯಾನಿಯಲ್ ಬಾಲಾಜಿ ಕನ್ನಡ ಖ್ಯಾತ ನಿರ್ದೇಶಕ ಸಿದ್ಧಲಿಂಗಯ್ಯರ ಕುಟುಂಬ ಸದಸ್ಯರಾಗಿದ್ದರು. ಹೆಚ್ಚಿನ ಚಿತ್ರಗಳಲ್ಲಿ ಇವರು ಖಳನಾಯಕನ ಪಾತ್ರಗಳಲ್ಲೇ ಕಾಣಿಸಿಕೊಂಡಿದ್ದರು. ರಾಕಿಂಗ್ ಸ್ಟಾರ್ ಯಶ್ ನಟನೆಯ ಕಿರಾತಕ ಸಿನೆಮಾದಲ್ಲೂ ಇವರು ವಿಲನ್ ಆಗಿ ನಟಿಸಿದ್ದರು.

ಸಿನೆಮಾ ಮಾತ್ರವಲ್ಲ ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದ  ಡ್ಯಾನಿಯಲ್ ಬಾಲಾಜಿ ಅನೇಕ ದೇವಾಲಯಗಳನ್ನು ನಿರ್ಮಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page