ಆಟಿ ಕಳಂಜ ಕುಣಿಸಿ ಸಂಗ್ರಹಿಸಿದ ಹಣ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ ರಾಮ ಗೋಳಿಯಡ್ಕ

ಬದಿಯಡ್ಕ :ತುಳುನಾಡಿನಲ್ಲಿ ಮಾರಿ ಕಳೆಯಲು ಆಟಿತಿಂಗಳಲ್ಲಿ ಮನೆ ಮನೆ ಆಟಿ ಕಳಂಜ ಸಂಚಾರ ಮಾಡಿ ಸಂಗ್ರಹವಾದ ಹಣವನ್ನು ದೈವ ಕಲಾವಿದ ಗೋಳಿಯಡ್ಕ ನಿವಾಸಿ ರಾಮ ಮÁದರಿಯÁಗಿದ್ದಾರೆ. ಇವರ ಈ ಪ್ರಾಮಾಣಿಕ ಕಾಳಜಿ ಪ್ರಶಂಸೆಗೆ ಪಾತ್ರವಾ ಗಿದೆ. ರಾಮಗೋಳಿಯಡ್ಕ ಬದಿಯಡ್ಕ ಮಂಡಲ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದು, ಸಂಗ್ರಹವಾದ ಹಣವನ್ನು ಬದಿಯಡ್ಕ ಮಂಡಲ ಕಾಂಗ್ರೆಸ್ ಅಧ್ಯಕ್ಷ ಶ್ಯಾಮಪ್ರಸಾದ ಮಾನ್ಯ ಮತ್ತು ಕಾರಡ್ಕ ಬ್ಲೋಕ್ ಕಾಂಗ್ರೆಸ್ ಉಪಾಧ್ಯಕ್ಷ ಗಂಗಾಧರ ಗೋಳಿಯಡ್ಕ ಅವರಿಗೆ ಹಸ್ತಾಂತರಿಸಿದರು.
ಕಾರಡ್ಕ ಬ್ಲೋಕ್ ಕಾಂಗ್ರೆಸ್ ಕಾರ್ಯದರ್ಶಿ ರಾಮ ಪಟ್ಟಾಜೆ, ಯೂತ್ ಕಾಂಗ್ರೆಸ್ ಜಿಲ್ಲಾ ಕಾರ್ಯದರ್ಶಿ ಶ್ರೀನಾಥ್, ಯೂತ್ ಕಾಂಗ್ರೆಸ್ ಮಂಡಲಾಧ್ಯಕ್ಷ ಕೃಷ್ಣ ಕುಮಾರ್, ಮಂಡಲ ಕಾಂಗ್ರೆಸ್ ಕಾರ್ಯದರ್ಶಿ ವಾಮನ ನಾಯ್ಕ್ ಜತೆಗಿದ್ದರು.

You cannot copy contents of this page