ಸಿಪಿಎಂ, ಎಡರಂಗ ಸರಕಾರ ಸಮಾನ ರೀತಿಯ ಸಂದಿಗ್ಧತೆಯಲ್ಲಿ ಸಿಲುಕಿದೆ-ಎ.ಪಿ. ಅಬ್ದುಲ್ಲ ಕುಟ್ಟಿ
ಕಾಸರಗೋಡು: ಸಿಪಿಎಂ ಮತ್ತು ಅದರ ನೇತೃತ್ವದಲ್ಲಿರುವ ಎಡರಂಗ ಸರಕಾರ ಸಮಾನ ರೀತಿಯಲ್ಲಿ ತೀವ್ರ ಸಂದಿಗ್ಧತೆಯಲ್ಲಿ ಸಿಲುಕಿ ಒದ್ದಾಡುತ್ತಿದೆ ಯೆಂದೂ, ರಾಜ್ಯದಲ್ಲಿ ಸಿಪಿಎಂನ ಬೆಳವಣಿಗೆ ದರ ದಿನೇ ದಿನೇ ಕೆಳಗೆ ಸಾಗುತ್ತಿದೆಯೆಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಎ.ಪಿ. ಅಬ್ದುಲ್ಲಕುಟ್ಟಿ ಹೇಳಿದ್ದಾರೆ.
ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ನಿನ್ನೆ ನಡೆದ ಬಿಜೆಪಿ ಜಿಲ್ಲಾ ಮಟ್ಟದ ಸದಸ್ಯತನ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡು ತ್ತಿದ್ದರು. ಸಿಪಿಎಂನ ಹಾಗೆ ಕಾಂಗ್ರೆಸ್ ಕೂಡಾ ತೀವ್ರ ಬಿಕ್ಕಟ್ಟಿನಲ್ಲಿ ಸಿಲುಕಿಕೊಂಡಿದೆ. ಅವುಗಳ ಸದಸ್ಯರು ಈ ಎರಡೂ ಪಕ್ಷಗಳನ್ನು ತ್ಯಜಿಸ ತೊಡಗಿದ್ದಾರೆ. ಇದೇ ಸಂದ ರ್ಭದಲ್ಲಿ ಯುವಕರು ಮತ್ತು ಮಹಿಳೆಯರು ನರೇಂದ್ರಮೋದಿ ನೇತೃತ್ವದ ಬಿಜೆಪಿಯತ್ತ ಹೆಚ್ಚಾಗಿ ಆಕರ್ಷಿತವಾ ಗುತ್ತಿದ್ದಾರೆ. ಬಿಜೆಪಿ ಸದಸ್ಯತ್ವ ಪಡೆಯು ವವರಲ್ಲಿ ಉಂಟಾಗಿ ರುವ ಅಭೂತ ಪೂರ್ವ ಬೆಳವಣಿಗೆಯೇ ಇದಕ್ಕೆ ಸಾಕ್ಷಿ ಯಾಗಿದೆ ಯೆಂದು ಅವರು ಹೇಳಿದ್ದಾರೆ.
ಚಿನ್ನ ಕಳ್ಳಸಾಗಾಟ, ಚಿನ್ನದ ಪೆಟ್ಟಿಗೆಗಳು, ಅಕ್ರಮವಾಗಿ ಮರ ಕಡಿದು ಸಾಗಾಟ ಮತ್ತು ಸುಫಾರಿ ತಂಡಗಳನ್ನು ಬಳಸಿ ಕೊಲೆಘಾತಕ ಕೃತ್ಯ ನಡೆಸುವಿಕೆ ಇತ್ಯಾದಿ ಗಂಭೀರ ಆರೋಪಗಳನ್ನು ಆಡಳಿತ ಪಕ್ಷದ ಶಾಸಕರೇ ರಾಜ್ಯ ಗೃಹ ಖಾತೆಯ ಮೇಲೆ ಹೊರಿಸಿದ್ದಾರೆ. ಆಡಳಿತ ಪಕ್ಷದ ಬೆಂಬಲದೊಂದಿಗೆ ಇದೆಲ್ಲಾ ನಡೆಯುತ್ತಿದೆಯೆಂಬ ಸತ್ಯವನ್ನು ಎಡರಂಗದ ಕಾರ್ಯಕರ್ತರು ಈಗ ಮನಗಾಣತೊಡಗಿದ್ದಾರೆ. ಅದರಿಂದ ಅವರೆಲ್ಲಾ ಈಗ ತಮ್ಮ ಪಕ್ಷಗಳನ್ನು ತ್ಯಜಿಸತೊಡಗಿದ್ದಾರೆ. ಬಿಜೆಪಿ ಸದಸ್ಯತನ ಅಭಿಯಾನವನ್ನು ಯಶಸ್ವಿಗೊಳಿಸುವಂತೆಯೂ ಇದೇ ಸಂದರ್ಭದಲ್ಲಿ ಅಬ್ದುಲ್ಲ ಕುಟ್ಟಿ ವಿನಂತಿಸಿಕೊಂಡಿದ್ದಾರೆ.
ಬಿಜೆಪಿ ಜಿಲ್ಲಾಧ್ಯಕ್ಷ ರವೀಶತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ. ವೇಲಾಯುಧನ್, ಸತೀಶ್ಚಂದ್ರ ಭಂಡಾರಿ, ಕೆ.ಕೆ. ನಾರಾಯಣನ್, ನ್ಯಾಯವಾದಿ ಮನೋಜ್ ಕುಮಾರ್, ಮನು ಲಾಲ್ ಮೇಲತ್ತ್ ಮೊದಲಾದವರು ಮಾತನಾಡಿದರು.