ಸಿಪಿಎಂ ನೇತಾರ ಪಕ್ಷದಿಂದ ಹೊರಕ್ಕೆ
ತಿರುವನಂತಪುರ: ಸಿಪಿಎಂ ಮಂಗಲಪುರಂ ಏರಿಯಾ ಸೆಕ್ರೆಟರಿಯಾಗಿದ್ದ ಮಧು ಮುಲ್ಲಶ್ಶೇರಿ ಎಂಬವರನ್ನು ಪಕ್ಷದಿಂದ ಹೊರ ಹಾಕಲಾಗಿದೆ. ಇವರು ಪಕ್ಷದ ಏರಿಯಾ ಸಮ್ಮೇಳನವನ್ನು ಬಹಿಷ್ಕರಿಸಿದ್ದರು. ಅಲ್ಲದೆ ಪಕ್ಷದ ಕಚೇರಿ ನಿರ್ಮಾಣದ ಫಂಡ್ ಲಪಟಾಯಿಸಿದ ಆರೋಪದಂತೆ ಪಕ್ಷ ಕ್ರಮ ಕೈಗೊಂಡಿರುವುದಾಗಿ ತಿಳಿಸಲಾಗಿದೆ.ಇದೇ ವೇಳೆ ಇವರು ಇಂದು ಬಿಜೆಪಿಗೆ ಸೇರ್ಪಡೆಗೊಳ್ಳುವುದಾಗಿ ತಿಳಿಸಿದ್ದು, ಇದರ ಬೆನ್ನಲ್ಲೇ ಸಿಪಿಎಂ ಇವರ ವಿರುದ್ಧ ಕ್ರಮ ಕೈಗೊಂಡಿರುವುದಾಗಿ ಹೇಳಲಾಗುತ್ತಿದೆ.