ಸಿಪಿಎಂ ಮಾಜಿ ಜಿಲ್ಲಾ ಕಾರ್ಯದರ್ಶಿ ಕೆ. ಕುಂಞಿರಾಮನ್ ನಿಧನ

ಚೆರುವತ್ತೂರು: ಸಿಪಿಎಂನ ಜಿಲ್ಲೆಯ ಪ್ರಮುಖ ಹಾಗೂ ಹಿರಿಯ ನೇತಾರನಾದ ಕೆ. ಕುಂಞಿರಾಮನ್ (೮೦) ನಿನ್ನೆ ಮಧ್ಯರಾತ್ರಿ ನಿಧನ ಹೊಂದಿದರು. ಸಿಪಿಎಂ ಮಾಜಿ ಜಿಲ್ಲಾ ಕಾರ್ಯದರ್ಶಿ, ರಾಜ್ಯ ಸಮಿತಿ ಸದಸ್ಯ, ತೃಕ್ಕರಿಪುರ ಶಾಸಕ ಎಂಬಿ ಸ್ಥಾನಗಳಲ್ಲಿ ಇವರು ಕಾರ್ಯಾಚರಿಸಿದ್ದರು.

ವೃದ್ದಾಪ್ಯ ಸಹಜ ಅಸೌಖ್ಯದ ಹಿನ್ನೆಲೆಯಲ್ಲಿ ಮಟ್ಟಲಾಯಿ ಎಂಬಲ್ಲಿ ಸ್ವಂತ ಮನೆಯಾದ ಮಾನವೀಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಅಸೌಖ್ಯ ತೀವ್ರಗೊಂಡುದರಿಂದ ಎರಡು ದಿನಗಳ ಹಿಂದೆ ಕಣ್ಣೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ನಿನ್ನೆ ಮಧ್ಯರಾತ್ರಿ ೧೨.೩೦ರ ವೇಳೆ ನಿಧನ ಸಂಭವಿಸಿದೆ.

ಮೃತದೇಹವನ್ನು ಇಂದು ಬೆಳಿಗ್ಗೆ ಕಾಲಿಕ್ಕಡವ್ ಕೃಷ್ಣನ್ ನಾಯರ್ ಸ್ಮಾರಕ ಮಂದಿರದಲ್ಲಿ ಸಾರ್ವಜನಿಕ ದರ್ಶನಕ್ಕಿರಿ ಸಲಾಗಿದೆ. ಕಾರಿಯಿಲ್ ವಿ.ವಿ. ಸ್ಮಾರಕ ಮಂದಿರ, ಚೆರುವತ್ತ್ತೂರು ಬಸ್ ನಿಲ್ದಾಣ ಪರಿಸರ, ಮಟ್ಟಲಾಯಿಯ ಮನೆ ಎಂಬೆ ಡೆಗಳಲ್ಲಿ ಸಾರ್ವಜನಿಕ ದರ್ಶನಕ್ಕಿರಿಸಲಾ ಗುವುದು. ಸಂಜೆ ೩ ಗಂಟೆಗೆ ಅಂತ್ಯ ಸಂಸ್ಕಾರ ನಡೆಯಲಿದೆ. ಚೆರುವತ್ತೂರು ಹಾಗೂ ತೃಕ್ಕರಿಪುರ ಮಂಡಲದ ಸಮಗ್ರ ಅಭಿವೃದ್ಧಿಗೆ ನೇತೃತ್ವ ನೀಡಿರುವುದು ಕೆ. ಕುಂಞಿರಾಮನ್ ಆಗಿದ್ದರು.೧೯೯೪ರಿಂದ ೨೦೦೪ವರೆಗೆ ಪಕ್ಷದ ಜಿಲ್ಲಾ ಕಾರ್ಯದರ್ಶಿಯಾಗಿ ಇವರು ಕಾರ್ಯಾಚರಿಸಿದ್ದಾರೆ. ೨೦೦೬ರಿಂದ ೨೦೧೬ವರೆಗೆ ತೃಕ್ಕರಿಪುರ ಶಾಸಕನಾಗಿದ್ದರು. ೧೯೭೯ರಿಂದ ೧೯೮೪ರವರೆಗೆ ಚೆರು ವತ್ತೂರು ಪಂಚಾಯತ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಚೆರುವತ್ತೂರು ತುರುತ್ತಿ ವಪ್ಪಿಲಮಾಟೆ ಕೆ.ವಿ. ಕುಂಞಿ ವೈದ್ಯರ್- ಕುಂಞಿ ಮಾಣಿಕ್ಯ ದಂಪತಿಯ ಪುತ್ರನಾಗಿದ್ದಾರೆ.ವಿದ್ಯಾರ್ಥಿಯಾಗಿರುವಾಗಲೇ ಸಾಮಾಜಿಕ ಚಟುವಟಿಕೆಗಳಲ್ಲಿ ನಿರತನಾಗಿದ್ದ ಕುಂಞಿರಾಮನ್‌ರನ್ನು ಎ.ಕೆ.ಜಿ.ಯವರು ಕೇರಳ ಸ್ಟೂಡೆಂಟ್ ಫೆಡರೇಶನ್‌ಗೆ ಸೇರ್ಪಡೆಗೊಳಿಸಿದರು.

Leave a Reply

Your email address will not be published. Required fields are marked *

You cannot copy content of this page