ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ ನಿಧನಕ್ಕೆ ಸಂತಾಪ
ಮಂಜೇಶ್ವರ: ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ರ ನಿಧನಕ್ಕೆ ಸಿಪಿಐ ಮಂಜೇಶ್ವರ ಮಂಡಲ ಸಮಿತಿ ವತಿಯಿಂದ ಹೊಸಂಗಡಿ ಎ.ಕೆ.ಜಿ ಮಂದಿರ ಸಮೀಪ ಸರ್ವಪಕ್ಷ ಸಂತಾಪ ಸೂಚಕ ಸಭೆ ನಡೆಯಿತು. ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಜಯರಾಮ ಬಲ್ಲಂಗುಡೇಲ್ ಅಧ್ಯಕ್ಷತೆ ವಹಿಸಿದರು. ಶಾಸಕ ಎ.ಕೆ.ಎಂ ಅಶ್ರಫ್ ಉದ್ಘಾಟಿಸಿದರು. ಸಿಪಿಐ ರಾಜ್ಯ ಸಮಿತಿ ಸದಸ್ಯ ಗೋವಿಂದನ್ ಪಳ್ಳಿಕಾಪ್ಪಿಲ್, ಸಿಪಿಐಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಕೆ. ಆರ್ ಜಯಾನಂದ, ಮುಸ್ಲಿಂ ಲೀಗ್ ಮಂಜೇಶ್ವರ ಮಂಡಲ ಕೋಶಾಧಿಕಾರಿ ಸೈಫುಲ್ಲ ತಂಙಳ್, ಬಿಜೆಪಿ ಮಂಜೇಶ್ವರ ಮಂಡಲ ಕಾರ್ಯದರ್ಶಿ ಆದರ್ಶ್ ಬಿ.ಎಂ, ಜೆ.ಡಿ.ಎಸ್ ನೇತಾರ ಕೆ.ಎ ಖಾದರ್, ದಲಿತ್ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಗುರುವಪ್ಪ ಮಂಜೇಶ್ವರ, ಮೀಂಜ ಪಂಚಾಯತ್ ಅಧ್ಯಕ್ಷೆ ಸುಂದರಿ ಆರ್. ಶೆಟ್ಟಿ, ಎ.ಐ.ವೈ.ಎಫ್ ಜಿಲ್ಲಾ ಅಧ್ಯಕ್ಷ ಅಜಿತ್ ಎಂ.ಸಿ ಲಾಲ್ ಬಾಗ್ ಮಾತನಾಡಿದರು.ಸಿಪಿಐ ಜಿಲ್ಲಾ ಸಮಿತಿ ಸದಸ್ಯ ರಾಮಕೃಷ್ಣ ಕಡಂಬಾರ್ ಸ್ವಾಗತಿಸಿ, ಸಿಪಿಐ ಮಂಜೇಶ್ವರ ಮಂಡಲ ಸಹ ಕಾರ್ಯದರ್ಶಿ ಎಸ್. ರಾಮಚಂದ್ರ ಬಡಾಜೆ ವಂದಿಸಿದರು.