ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ ನಿಧನ

ಕೊಚ್ಚಿ: ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ (೭೩) ಅಸೌಖ್ಯ ನಿಮಿತ್ತ ಕೊಚ್ಚಿಯ ಅಮೃತ ಆಸ್ಪತ್ರೆಯಲ್ಲಿ ನಿನ್ನೆ ನಿಧನಹೊಂದಿದರು. ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಕಾನಂ  ಅವರ ಕಾಲಿನ ಪಾದವನ್ನು ಇದೇ ಆಸ್ಪತ್ರೆಯಲ್ಲಿ ಶಸ್ತ್ರಕ್ರಿಯೆಗೊಳ ಪಡಿಸಲಾಗಿತ್ತು. ಈ ಮಧ್ಯೆ ನಿನ್ನೆ ಅವರು ದಿಢೀರ್ ಹೃದಯಾಘಾತಕ್ಕೊ ಳಗಾಗಿ ತಕ್ಷಣ  ತುರ್ತು  ಚಿಕಿತ್ಸೆ ನೀಡ ಲಾಯಿತಾದರೂ  ಅದು ಫಲಕಾರಿ ಯಾಗದೆ ಸಂಜೆ  ಮೃತಪಟ್ಟರು.

ಪಾರ್ಥೀವ ಶರೀರವನ್ನು ಇಂದು ಬೆಳಿಗ್ಗೆ ಹೆಲಿಕಾಫ್ಟರ್‌ನಲ್ಲಿ ತಿರುವನಂತ ಪುರ ಜಗದಿಯಲ್ಲಿರುವ ಅವರ ನಿವಾಸಕ್ಕೆ ತರಲಾಯಿತು. ಅಲ್ಲಿಂದ ಅದನ್ನು ಸಿಪಿಎಂ ರಾಜ್ಯ ಕೌನ್ಸಿಲ್ ಕಚೇರಿ ಬಳಿ ಸಾರ್ವಜನಿಕ ದರ್ಶನಕ್ಕಿರಿಸಲಾಯಿತು. ಸಿಪಿಐ ಮತ್ರವಲ್ಲದೆ ವಿವಿಧ ರಾಜಕೀಯ ಪಕ್ಷಗಳ ನೇತಾರರು ಹಾಗೂ ಭಾರೀ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಿ ಮೃತರ ಅಂತಿಮ ದರ್ಶನ ನಡೆಸಿದರು. ಅಂತ್ಯಸಂಸ್ಕಾರ ನಾಳೆ ಬೆಳಿಗ್ಗೆ ೧೧ ಗಂಟೆಗೆ ಕೋಟ್ಟಯಂ ವಾಳೂರು ಕಾನತ್ತ್ ವೀಟ್‌ನ ಮನೆ ಹಿತ್ತಿಲಲ್ಲಿ ನೆರವೇರಿಸಲಾಗುವುದು.

ಕಾನಂ ರಾಜೇಂದ್ರನ್  ಪತ್ನಿ ನಿವೃತ್ತ ಅಧ್ಯಾಪಿಕೆ ವನಜಾ, ಮಕ್ಕಳಾದ ಸಂದೀಪ್, ಸ್ಮಿತ, ಸೊಸೆ ತಾರಾ, ಅಳಿಯ ಸರ್ವೇಶ್ವರ ಹಾಗೂ ಅಪಾರ   ಬಂಧು-ಮಿತ್ರರನ್ನು ಅಗಲಿದ್ದಾರೆ.

೧೯೫೦ ನವಂಬರ್ ೧೦ರಂದು ಕೋಟ್ಟಯಂ ಕಟ್ಟಿಕ್ಕಲ್‌ನಲ್ಲಿ ಎ.ಕೆ. ಪರಮೇಶ್ವರನ್ ನಾಯರ್-ಟಿ.ಕೆ. ಚೆಲ್ವಮ್ಮ ದಂಪತಿಯ ಪತ್ರನಾಗಿ  ರಾಜೇಂದ್ರನ್ ಜನಿಸಿದರು. ಎಐವೈಎಫ್ ಮೂಲಕ ರಾಜ್ಯ ರಾಜಕೀಯ ಪ್ರವೇಶ ನಡೆಸಿದರು. ೧೯೮೨ ಮತ್ತು ೧೯೯೭ರಲ್ಲಿ ವಾಳೂರು ವಿಧಾನಸಭಾ ಕ್ಷೇತ್ರದಲ್ಲಿ ಗೆದ್ದು ವಿಧಾನಸಭೆಗೆ ಎರಡು ಬಾರಿ ಆಯ್ಕೆಯಾಗಿದ್ದರು.  ಕಾನಂ ರಾಜೇಂದ್ರನ್ ೨೦೧೫ರಿಂದ ಸಿಪಿಐಯ ರಾಜ್ಯ ಕಾರ್ಯದ ರ್ಶಿಯಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದರು. ೫೩ ವಷಗಳಿಂದ ಅವರು ಸಿಪಿಐ ರಾಜ್ಯ ಕೌನ್ಸಿಲ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ. ಅವರ ನಿಧನಕ್ಕೆ ಹಲವು ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page