ಸೀತಾಂಗೋಳಿ: ಗಣೇಶೋತ್ಸವ ಆಮಂತ್ರಣ ಪತ್ರ ಬಿಡುಗಡೆ
ಸೀತಾಂಗೋಳಿ: ಸೀತಾಂಗೋಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ನಡೆಯುವ ಗಣೇಶೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಇಲ್ಲಿನ ಶ್ರೀದೇವಿ ಭಜನಾ ಮಂದಿರದಲ್ಲಿ ನಡೆಯಿತು. ಸಮಿತಿಯ ಅಧ್ಯಕ್ಷ ಜನಾರ್ದನ ಕಣ್ಣೂರು ಅವರು ಮಂದಿರದ ಅಧ್ಯಕ್ಷ ಜಯಂತ ಪಾಟಾಳಿಯವರಿಗೆ ಆಮಂತ್ರಣ ನೀಡಿ ಬಿಡುಗಡೆಗೊಳಿಸಿದರು.
ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಸುಕುಮಾರ ಕುದ್ರೆಪ್ಪಾಡಿ, ಕಾರ್ಯದರ್ಶಿ ಹರೀಶ್ ಸಿದ್ದಿಬೈಲ್, ಚಿಕ್ಕಪ್ಪು ರೈ, ಅಪ್ಪಣ್ಣ ಎಸ್.ಬಿ, ನಾರಾಯಣ, ಗೋಪಾಲ ಮುಖಾರಿ, ಉದಯ ಮುಖಾರಿಕಂಡ, ಶಂಕರ ಪಾಟಾಳಿ ಹಾಗೂ ಪದಾಧಿ ಕಾರಿಗಳು ಉಪಸ್ಥಿತರಿದ್ದರು.