ಸುಕುಮಾರ ಆಲಂಪಾಡಿಯವರ ಜ್ಯೋತಿಷ ಸಾರಕೋಶ ಕೃತಿ ಬಿಡುಗಡೆ
ಮಂಗಳೂರು: ಜ್ಯೋತಿಷ ಶಾಸ್ತ್ರ ಸನಾತನ ಋಷಿ ಪರಂಪರೆಯಲ್ಲಿ ಬೆಳಗಿದ ಶಾಸ್ತ್ರ. ವೇದಗಳ ಕಾಲದಲ್ಲಿ ಕಾಲಗಣನೆಯನ್ನು ತಿಳಿಸುವ ವೇದಾಂಗ ಜ್ಯೋತಿಷ ಮುಂದೆ ಹಲವಾರು ಚಿಂತನೆಗಳನ್ನು ಒಳಗೊಂಡು ಆಧುನಿಕ ಸ್ವರೂಪವನ್ನು ಪಡೆಯಿತು. ಜ್ಯೋತಿಷವನ್ನು ಕುರಿತು ಸಮಗ್ರ ದೃಷ್ಟಿಕೋನದಿಂದ ಕೂಡಿದ ‘ಜ್ಯೋತಿಷ ಸಾರಕೋಶ’ ಒಂದು ಮಾದರಿ ಪಠ್ಯವಾಗಿದೆ. ಜ್ಯೋತಿಷ ಶಾಸ್ತ್ರವನ್ನು ಕುರಿತು ಸುಕುಮಾರ ಆಲಂಪಾಡಿಯವರು ಕಳೆದ ಅನೇಕ ವರ್ಷಗಳಿಂದ ಮಾಡಿದ ಅಧ್ಯಯನ, ಅಲೋಚನೆ ಗಳು ಈ ಕೃತಿಯಲ್ಲಿ ಸಾಕಾರಗೊಂ ಡಿದೆ ಎಂದು ಪ್ರಸಿದ್ಧ ವೈದಿಕ ಹಾಗೂ ಸಂಸ್ಕೃತ ವಿದ್ವಾಂಸರಾದ ಡಾ| ಸತ್ಯಕೃಷ್ಣ ಭ ಟ್ ಅಭಿಪ್ರಾಯಪಟ್ಟರು.
ಕಾಸರಗೋಡಿನ ಸುಜೀವ ಪ್ರಕಾಶನ ಮತ್ತು ಮಂಗಳೂರಿನ ಸಾಹಿತ್ಯ ಕೇಂದ್ರದ ಸಂಕುಯ್ಕ ಆಶ್ರಯದಲ್ಲಿ ಮಂಗಳೂರಿನ ಮಂಗಳಾ ಸಭಾಂಗಣದಲ್ಲಿ ನಡೆದ ಪ್ರಸಿದ್ಧ ಜ್ಯೋತಿಷ ಚಿಂತಕ, ಲೇಖಕ ಸುಕುಮಾರ ಆಲಂಪಾಡಿಯವರ ಜ್ಯೋತಿಷ ಸಾರಕೋಶ ಕೃತಿಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು.
ಹಿರಿಯ ಜ್ಯೋತಿಷ ಸಲಹೆಗಾರರೂ, ಶಾಸ್ತ್ರ ಚಿಂತಕರೂ ಆದ ತೆಕ್ಕುಂಜ ಜಯಶಂಕರ ಭಟ್ಟರು ಶುಭಾಶಂಸನೆಗೈದರು. ಈ ಕೃತಿಯ ಜಿಜ್ಞಾಸುಗಳಿಗೆ ನಿಖರವಾದ ಪೂರ್ವ ಮಾಹಿತಿಗಳನ್ನೊಳಗೊಂಡ ಪರಾಮರ್ಶನ ಗ್ರಂಥವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವಹಿಸಿದ್ದ ಮಂಗಳೂರಿನ ಹಿರಿ ವೈದಿಕ ವಿದ್ವಾಂಸರೂ, ಮಂಗಳೂರು ಪಂಡಿತ ಪಂಚಾಂಗಂನ ಪಂಚಾಂಗಕರ್ತರಾದ ಪಂಡಿತ ನರಸಿಂಹ ಆಚಾರ್ಯರು ಮಾತನಾಡಿ ಜ್ಞಾನ ಸಾಗರದಂತಿರುವ ಜ್ಯೋತಿಶಷ ಶಾಸ್ಕ್ರವನ್ನು ಆಳವಾಗಿ ಅಭ್ಯಸಿಸಿ ಅದರ ಸಾರಸರ್ವಸ್ವವು ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸರಳ ಶೈಲಿಯಲ್ಲಿ ಈ ಕೃತಿಯನ್ನು ರಚಿಸಿರುವುದು ಸುಕುಮಾರರ ಅಪೂರ್ವ ಸಾಧನೆಯಾಗಿದೆ. ಇಂತಹ ಇನ್ನೂ ಅನೇಕ ಕೃತಿಗಳು ಅವರ ಲೇಖನಿಯಿಂದ ಮೂಡಿ ಬರಲಿ ಎಂದು ಹಾರೈಸಿದರು.