ಸುಡುಮದ್ದು ಪ್ರದರ್ಶನ: ಕೇಸು ದಾಖಲು
ಕಾಸರಗೋಡು: ಅನುಮತಿಯಿಲ್ಲದೆ ಸುಡುಮದ್ದು ಪ್ರದರ್ಶನ ನಡೆಸಿದುದರಿಂದ ಮಧೂರು ಕ್ಷೇತ್ರ ಉತ್ಸವ ಸಮಿತಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ವಿದ್ಯಾನಗರ ಪೊಲೀಸ್ ಇನ್‌ಸ್ಪೆಕ್ಟರ್ ಯು.ಪಿ.ವಿಪಿನ್ ನೇರವಾಗಿ ಕೇಸು ದಾಖಲಿಸಿದ್ದಾರೆ. ಎಪ್ರಿಲ್ 5ರಂದು ರಾತ್ರಿ 11.30ರ ವೇಳೆ ಮಧೂರು ಶ್ರೀ ಮದನಂತೇಶ್ವರ ಸಿದ್ದಿವಿನಾಯಕ ಕ್ಷೇತ್ರದ 150 ಮೀಟರ್ ಪಶ್ಚಿಮ ಭಾಗದಲ್ಲಿರುವ ಗದ್ದೆಯಲ್ಲಿ ಸುಡುಮದ್ದು ಪ್ರದರ್ಶನ ನಡೆಸಿರುವುದಾಗಿ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ತಿಳಿಸಲಾಗಿದೆ.