ಸುಭಾಸ್‌ನಗರ ಲೈಬ್ರೆರಿಯಲ್ಲಿ ರಕ್ತದೊತ್ತಡ, ಮಧುಮೇಹ ತಪಾಸಣಾ ಶಿಬಿರ
ಉಪ್ಪಳ: ಯುವ ಶಕ್ತಿಫ್ರೆಂಡ್ಸ್ ಸರ್ಕಲ್ ಮತ್ತು ಲೈಬ್ರರಿ ಸುಭಾಷ್ ನಗರ ಇದರ ವತಿಯಿದ ರಕ್ತದೊತ್ತಡ ಮತ್ತು ಮಧುಮೇಹ ತಪಾಸಣಾ ಶಿಬಿರ ಲೈಬ್ರೆರಿಯಲ್ಲಿ ನಡೆಯಿತು. ತಾಲೂಕು ಲೈಬ್ರೆರಿ ಕೌನ್ಸಿಲ್ ಜೊತೆ. ಕಾರ್ಯದರ್ಶಿ ಶ್ರೀಕುಮಾರಿ ಟೀಚರ್ ಉದ್ಘಾಟಿಸಿ ದರು. ಮಂಗಲ್ಪಾಡಿ ತಾಲೂಕು ಆಸ್ಪತ್ರೆ ಸೂಪರಿಟೆಂಡೆAಟ್ ಡಾ.ಅಂಬು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು. ಯುವಶಕ್ತಿ ಫ್ರೆಂಡ್ಸ್ ಸರ್ಕಲ್ ಲೈಬ್ರೆರಿ ಅಧ್ಯಕ್ಷ ಲಕ್ಷ್ಮಣ ಪೂಜಾರಿ ಬೊಳ್ಳಾರ್ ಅಧ್ಯಕ್ಷತೆ ವಹಿಸಿದರು. ಮಂಗಲ್ಪಾಡಿ ಗ್ರಾಮ ಪಂ. ಸದಸ್ಯೆ ಸುಜಾತ ಯು. ಶೆಟ್ಟಿ ಉಪಸ್ಥಿತರಿದ್ದರು. ಯುವಶಕ್ತಿ ಲೈಬ್ರೆರಿ ಕಾರ್ಯ ದರ್ಶಿ ರವೀಂದ್ರ ಶೆಟ್ಟಿ ಬೊಳ್ಳಾರ್ ಸ್ವಾಗತಿಸಿ ಜನಾರ್ಧನ್ ಕುಲಾಲ್ ಬೊಳ್ಳಾರ್ ವಂದಿಸಿದರು.