ಸುಳ್ಳು ಕೇಸುಗಳ ಮೂಲಕ ಬಿಜೆಪಿ ನೇತಾರರನ್ನು ಸಿಲುಕಿಸುವ ಯತ್ನ ಫಲಿಸದು-ಕೆ. ಸುರೇಂದ್ರನ್
ಕಾಸರಗೋಡು: ಸುಳ್ಳು ಕೇಸು ಗಳನ್ನು ದಾಖಲಿಸುವ ಮೂಲಕ ಬಿಜೆಪಿ ನೇತಾರರನ್ನು ಸಿಲುಕಿಸ ಬಹುದೆಂದು ಯಾರೂ ಭಾವಿಸುವುದು ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಸುರೇಂದ್ರನ್ ತಿಳಿಸಿದ್ದಾರೆ. ಮಂಜೇಶ್ವರ ಚುನಾವಣೆ ಪ್ರಕರಣಕ್ಕೆ ಸಂಬಂಧಿಸಿ ನಿನ್ನೆ ನ್ಯಾಯಾಲಯ ದಿಂದ ಜಾಮೀನು ಲಭಿಸಿದ ಬಳಿಕ ಅವರು ಪತ್ರಕರ್ತ ರೊಂದಿಗೆ ಮಾತನಾಡುತ್ತಿದ್ದರು.
ಮಂಜೇಶ್ವರ ಪ್ರಕರಣ ರಾಜಕೀಯ ದ್ವೇಷ ತೀರಿಸಲು ಸಿಪಿಎಂನವರು ಮಾಡಿದ ಕುತಂ ತ್ರವಾಗಿದೆಯೆಂದೂ ಸುರೇಂದ್ರನ್ ಆರೋಪಿಸಿದ್ದಾರೆ. ಈಗ ದಾಖ ಲಿಸಿಕೊಂಡಿರುವ ಪ್ರಕರಣ ಗಳಿಂದ ಬಿಜೆಪಿಯನ್ನು ಇಲ್ಲದಾಗಿಸ ಬಹುದೆಂದು ಯಾರೂ ಭಾವಿಸು ವುದು ಬೇಡ. ಮಂಜೇಶ್ವರ, ಬತ್ತೇರಿ, ಕೊಡಕರ ಪ್ರಕರಣಗಳು ಸುಳ್ಳು ಕೇಸುಗಳೆಂದು ನ್ಯಾಯಾಲಯದಲ್ಲಿ ಸಾಬೀತು ಪಡಿಸಲಾಗುವುದು. ಕ್ರೈಂಬ್ರಾಂಚ್ ಎರಡು ವರ್ಷಗಳ ತನಿಖೆ ನಡೆಸಿ ನ್ಯಾಯಾಲಯದಲ್ಲಿ ಸಲ್ಲಿಸಿದ ಪ್ರಕರಣ ಇದಾಗಿದೆ. ಪ್ರೋಸಿಕ್ಯೂಶನ್‌ನ ಯಾವುದೇ ವಾದಗಳನ್ನು ನ್ಯಾಯಾಲಯ ಅಂಗೀಕರಿಸದು. ತನಿಖೆಗೆ ಆರಂಭ ದಿಂದಲೇ ಸಹಕರಿಸಲಾಗುತ್ತಿದೆ. ಕೇಸು ರದ್ದುಪಡಿಸುವಂತೆ ಆಗ್ರಹಿಸಿ ಅರ್ಜಿ ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.