ಸೊತ್ತು ವಿಂಗಡಣೆ ವೇಳೆ ಹೊಡೆದಾಟ: ಓರ್ವನಿಗೆ ಗಾಯ

 ಕುಂಬಳೆ: ಸೊತ್ತು ವಿಂಗಡಣೆ ಚರ್ಚೆ ವೇಳೆ ನಡೆದ ಹೊಡೆದಾಟ ದಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಪೆರುವಾಡ್ ನಿವಾಸಿ ಪಿ.ಎಚ್. ಹಾರಿಸ್ (೪೧) ಗಾಯಗೊಂಡಿದ್ದು, ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ನಿನ್ನೆ ಪೆರುವಾಡ್‌ನ ಮನೆಯಲ್ಲಿ ಸೊತ್ತು  ವಿಂಗಡಣೆ ಚರ್ಚೆ ನಡೆದಿತ್ತು. ಈ ವೇಳೆ ವಾಗ್ವಾದ ನಡೆದು ಹಲ್ಲೆಗೈದಿರುವುದಾಗಿ ದೂರಲಾಗಿದೆ.

Leave a Reply

Your email address will not be published. Required fields are marked *

You cannot copy content of this page