ಸೊಸೆಯ ಪರಾಕ್ರಮ: ಅತ್ತೆ, ಪತಿಯ ಸಹೋದರನಿಗೆ ಗಾಯ

ಕಾಸರಗೋಡು: ಸೊಸೆಯ ಪರಾಕ್ರಮದಿಂದ ಅತ್ತೆ ಹಾಗೂ ಪತಿಯ ಸಹೋದರ ಗಾಯಗೊಂಡು ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಘಟನೆ ನಡೆದಿದೆ. ನಿನ್ನೆ ಸಂಜೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶವೊಂದರಲ್ಲಿ ಈ ಘಟನೆ ನಡೆದಿದೆ. ಅಡುಗೆ ಕೋಣೆಯಿಂದ ಚಾಕು ತೆಗೆದ ಯುವತಿ ಪತಿಯ ತಾಯಿ ಮೇಲೆ ಆಕ್ರಮಿಸಿರುವುದಾಗಿ ಹೇಳಲಾಗುತ್ತಿದೆ. ಈ ವೇಳೆ ತಡೆಯಲು ಯತ್ನಿಸಿದ ಪತಿಯ ಸಹೋದರನಿಗೂ ಗಾಯಗಳಾಗಿದೆ. ಬೊಬ್ಬೆ ಕೇಳಿ ನೆರೆಮನೆ ನಿವಾಸಿಗಳು ತಲುಪಿ ಯುವತಿಯನ್ನು ಸಮಾಧಾನ ಪಡಿಸಲು ಪ್ರಯತ್ನಿಸಿದರೂ ಚಾಕುವನ್ನು ಕೆಳಗಿಡಲು ಆಕೆ ತಯಾರಾಗಲಿಲ್ಲ. ಈ ಮಧ್ಯೆ ವಿಷಯ ತಿಳಿದು ಪೊಲೀಸರು ತಲುಪಿ ಯುವತಿಯನ್ನು ಸಮಾಧಾನಪಡಿಸಿದ್ದಾರೆ. ಯುವತಿಯ ಪತಿ ಗಲ್ಫ್‌ನಲ್ಲಿದ್ದಾನೆ. ಇದೇ ವೇಳೆ ಘಟನೆಗೆ ಸಂಬಂಧಿಸಿ  ಕೇಸು ದಾಖಲಿಸಿಕೊಂಡಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page