ಸೋಂಕಾಲಿನಲ್ಲಿ ದಿನಪೂರ್ತಿ ಉರಿಯುತ್ತಿರುವ ಮಿನಿಮಾಸ್ಟ್ ದೀಪ

ಉಪ್ಪಳ: ಕೆಲವು ಕಡೆ ಬೀದಿ ದೀಪವಿದ್ದರೂ ಉರಿಯದೆ ಕತ್ತಲೆಯಿಂದ ಸಮಸ್ಯೆಗೀಡಾಗುತ್ತಿರುವ ಘಟನೆ ನಡೆಯುತ್ತಿದೆ. ಆದರೆ ಸೋಂಕಾಲು ಮಸೀದಿ ಬಳಿಯ ಬಸ್ ನಿಲ್ದಾಣ ಪರಿಸರದಲ್ಲಿ ಸ್ಥಾಪಿಸಲಾದ ಮಿನಿಮಾಸ್ಟ್ ಬೀದಿ ದೀಪ ರಾತ್ರಿ ಹಗಲೂ ಉರಿಯುತ್ತಿರುವ ದೃಶ್ಯ ಕಂಡುಬAದಿದೆ. ಇದರಿಂದ ಪಂಚಾಯತ್‌ಗೆ ವಿದ್ಯುತ್ ಬಿಲ್‌ನ ಹೊರೆ ಅಧಿಕವಾಗುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟಿದ್ದಾರೆ. ದೀಪದ ಕಂಬದಲ್ಲಿ ಅಳವಡಿಸಿದ ಪ್ಯೂಸ್ ಹಾನಿಗೀಡಾಗಿರುವುದೇ ಹಗಲು ಹೊತ್ತಿನಲ್ಲಿ ಉರಿಯಲು ಕಾರಣವೆನ್ನಲಾಗಿದೆ. ಈ ಹಿಂದೆ ಒಂದು ತಿಂಗಳ ತನಕ ನಿರಂತರವಾಗಿ ಹಗಲು ಉರಿಯುತ್ತಿತ್ತು. ಬಳಿಕ ನಂದುತ್ತಿತ್ತು. ಇದೀಗ ಹಲವು ದಿನಗಳಿಂದ ಹಗಲು ಹೊತ್ತಿನಲ್ಲಿ ಉರಿಯುತ್ತಿದೆ. ರಸ್ತೆ ಬದಿಯಲ್ಲಿರುವ ಕೆಲವೊಂದು ಬೀದಿ ದೀಪಗಳು ಹಗಲು ಉರಿಯುತ್ತಿರುವುದು ಹೆಚ್ಚಾಗುತ್ತಿದೆ. ಸಂಬAಧಪಟ್ಟ ಅಧಿಕಾರಿಗಳು ದೀಪಗಳನ್ನು ದುರಸ್ತಿಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page