ಸ್ಕೂಟರ್ನಲ್ಲಿ ಸಾಗಿಸುತ್ತಿದ್ದ ಕರ್ನಾಟಕ ಮದ್ಯ ವಶ: ಓರ್ವ ಸೆರೆ
ಮಂಜೇಶ್ವರ: ಕುಂಜತ್ತೂರಿನಲ್ಲಿ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಇಲೆಕ್ಟ್ರಿಕ್ ಸ್ಕೂಟರ್ನಲ್ಲಿ ಸಾಗಿಸಲಾಗುತ್ತಿದ್ದ 23.4 ಲೀಟರ್ ಕರ್ನಾಟಕ ಮದ್ಯ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇದಕ್ಕೆ ಸಂಬಂಧಿಸಿ ಹೊಸಬೆಟ್ಟು ಅಯ್ಯರ್ ಕಟ್ಟೆ ಕೀರ್ತೇಶ್ವರ ರಸ್ತೆ ಬಳಿಯ ಪ್ರಶಾಂತ್ (43) ಎಂಬಾತನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.
ಕುಂಬಳೆ ಎಕ್ಸೈಸ್ ರೇಂಜ್ ಕಚೇರಿಯ ಪ್ರಿವೆಂಟೀವ್ ಆಫೀಸರ್ ಮನಾಸ್ ಕೆ.ವಿ.ಯವರ ನೇತೃತ್ವದಲ್ಲಿ ಪ್ರಿವೆಂಟೀವ್ ಆಫೀಸರ್ ಮೊದೀನ್ ಸಾಧಿಕ್ ಟಿ.ಎಂ., ಸಿವಿಲ್ ಎಕ್ಸೈ ಆಫೀಸರ್ಗಳಾದ ಮನೋಜ್ ಕುಮಾರ್ ಕೆ.ಪಿ, ಪ್ರಜಿತ್ ಪಿ, ಜಿತಿನ್ ವಿ. ಎಂಬವರ ನೇತೃತ್ವದ ಅಬಕಾರಿ ತಂಡ ಈ ಕಾರ್ಯಾಚರಣೆ ನಡೆಸಿದೆ.
ಇದೇ ರೀತಿ 3.06 ಲೀಟರ್ ಕರ್ನಾಟಕ ಮದ್ಯ ಕೈವಶವಿರಿಸಿಕೊಂಡ ಆರೋಪದಂತೆ ಬಾಯಾರು ಕನಿಯಾಲತ್ತಡ್ಕದ ಸಂತೋಷ್ ಕೆ. (35) ಎಂಬಾತನನ್ನು ಕುಂಬಳೆ ಎಕ್ಸೈಸ್ ರೇಂಜ್ ಕಚೇರಿಯ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್ಪೆಕ್ಟರ್ (ಗ್ರೇಡ್) ಅನೀಶ್ ಕುಮಾರ್ ನೇತೃತ್ವದ ತಂಡ ಕನಿಯಾಲತ್ತಡ್ಕದಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಿದೆ. ಈ ಅಬಕಾರಿ ಕಾರ್ಯಾಚರಣೆಯಲ್ಲಿ ಸಿಇಒಗಳಾದ ರಂಜಿತ್ ಟಿ.ಕೆ, ಲಿಮ ಪಿ.ಕೆ, ಅಖಿಲೇಶ್ ಎಂ.ಎಂ. ಧನೇಶ್ ಎಂ. ಎಂಬಿವರು ಒಳಗೊಂಡಿದ್ದಾರೆ.