ಸ್ಕೂಟರ್ ಉಪೇಕ್ಷಿಸಿ ಸವಾರ ಪರಾರಿ: ಮದ್ಯ, ಸ್ಕೂಟರ್ ಪೊಲೀಸ್ ವಶ

ಮಂಜೇಶ್ವರ: ಪೊಲೀಸ್ ವಾಹನವನ್ನು ಕಂಡು ಮದ್ಯ ಸಹಿತ ಸ್ಕೂಟರ್ ಉಪೇಕ್ಷಿಸಿ ವ್ಯಕ್ತಿ ಪರಾರಿಯಾದ ಘಟನೆ ನಡೆದಿದೆ. ಉಪೇಕ್ಷಿಸಿದ ಸ್ಕೂಟರನ್ನು ಪರಿಶೀಲಿಸಿ ದಾಗ ಅದರಲ್ಲಿ ೯೦ ಮಿಲ್ಲಿಯ ೩೨೦ ಪ್ಯಾಕೆಟ್ ಮದ್ಯ ಪತ್ತೆಯಾಗಿದೆ.

ನಿನ್ನೆ ಸಂಜೆ ೬ ಗಂಟೆಗೆ ಮಂಜೇಶ್ವರ ಕಣ್ವತೀರ್ಥದಿಂದ ರೈಲ್ವೇ ಗೇಟ್ ಭಾಗಕ್ಕೆ ಸ್ಕೂಟರ್ ಸಂಚರಿ ಸುತ್ತಿತ್ತು. ಈ ವೇಳೆ ಮಂಜೇಶ್ವರ ಠಾಣೆಯ ಎಸ್‌ಐ ಪ್ರಶಾಂತ್ ಕೆ.ಯವರು  ಗಸ್ತು ನಡೆಸುತ್ತಿದ್ದ ವಾಹನ ಈ ಭಾಗದಿಂದ ಬರುತ್ತಿದ್ದಾಗ ಸ್ಕೂಟರ್ ಉಪೇಕ್ಷಿಸಿ ಸವಾರ ಪರಾರಿಯಾಗಿದ್ದಾನೆ. ಸ್ಕೂಟರ್ ಹಾಗೂ ಮದ್ಯವನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸವಾರನ ವಿರುದ್ಧ ಕೇಸು ದಾಖಲಿಸಿದ್ದಾರೆ. ಆರೋಪಿಯ ಗುರುತು ಪತ್ತೆಯಾಗಿದೆ.

Leave a Reply

Your email address will not be published. Required fields are marked *

You cannot copy content of this page