ಸ್ಕೂಟರ್ ಕಳವು ಆರೋಪಿ ಸೆರೆ
ಕಾಸರಗೋಡು: ಸ್ಕೂಟರ್ ಕಳವುಗೈದು ಸಾಗಿಸಿದ ಬಳಿಕ ಅದರಲ್ಲಿದ್ದ ಹಣ ದೋಚಿದ ಪ್ರಕರಣದ ಆರೋಪಿಯನ್ನು ಹೊಸದುರ್ಗ ಪೊಲೀಸರು ಬಂಧಿಸಿದ್ದಾರೆ. ಚಟ್ಟಂಚಾಲ್ ನಿವಾಸಿ ನವಾಜ್ (35) ಬಂಧಿತನಾದ ಆರೋಪಿ. ಜುಲೈ 12ರಂದು ಸಂಜೆ ಹೊಸದುರ್ಗ ನೋರ್ತ್ ಕೋಟಚ್ಚೇರಿಯಲ್ಲಿ ನಿಲ್ಲಿಸಲಾಗಿದ್ದ ಹೊಸದುರ್ಗ ಆವಿಕ್ಕೆರೆ ನಿವಾಸಿ ಅನ್ಸೀರ್ ಎಂಬವರ ಸ್ಕೂಟರನ್ನು ಕಳವುಗೈದು ಸಾಗಿಸಿದ ನಂತರ ಅದರಲ್ಲಿದ್ದ 28,000 ರೂ. ನಗದನ್ನು ದೋಚಿದ ಬಳಿಕ ಸ್ಕೂಟರನ್ನು ತೆಕ್ಕೇಕಡಪುರದಲ್ಲಿ ಉಪೇಕ್ಷಿಸಲಾಗಿತ್ತು. ಅದಕ್ಕೆ ಸಂಬಂಧಿಸಿ ಪೊಲೀಸರು ನವಾಜ್ನನ್ನು ಬಂಧಿಸಿದ್ದಾರೆ. ಈತನ ವಿರುದ್ಧ ಇತರ ಪೊಲೀಸ್ ಠಾಣೆಗಳಲ್ಲೂ ಕೇಸುಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.