ಸ್ಥಳೀಯಾಡಳಿತ ಸಂಸ್ಥೆಗಳ ಮತದಾರ ಯಾದಿ: ಅತೀ ಹೆಚ್ಚು ಮತದಾರರು ಒಳವಣ್ಣ ಪಂಚಾಯತ್ನಲ್ಲಿ, ಅತೀ ಕಡಿಮೆ ಇಲಮಲಕುಡಿಯಲ್ಲಿ
ತಿರುವನಂತಪುರ: ಸ್ಥಳೀಯಾಡಳಿತ ಸಂಸ್ಥೆಗಳ ಮತದಾರ ಯಾದಿಯಲ್ಲಿ ಹೊಸ ಮತದಾರರ ಸೇರ್ಪಡೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ.
ಇನ್ನು ರಾಜ್ಯದ ಗ್ರಾಮ ಪಂಚಾಯತ್ಗಳ ಪೈಕಿ ಅತೀ ಹೆಚ್ಚು ಎಂಬಂತೆ ಕಲ್ಲಿಕೋಟೆ ಜಿಲ್ಲೆಯ ಒಳವಣ್ಣ ಗ್ರಾಮ ಪಂಚಾಯತ್ನಲ್ಲಿ ೨೫೪೯೧ ಗಂಡಸರು ಮತ್ತು ೨೬೮೩೩ ಮಹಿಳೆಯರು ಮತ್ತು ಎರಡು ಮಂಗಳಮುಖಿಯರು ಸೇರಿದಂತೆ ಒಟ್ಟು ೫೨೩೨೬ ಮತದಾರರಿದ್ದಾರೆ. ಅತೀ ಕಡಿಮೆ ಎಂಬಂತೆ ಇಡುಕ್ಕಿ ಜಿಲ್ಲೆಯ ಇಡಮಲಕುಡಿ ಪಂಚಾಯತ್ನಲ್ಲಿ ೯೪೧ ಗಂಡಸಲು ಮತ್ತು ೯೫೮ ಮಹಿಳೆಯರು ಸೇರಿದಂತೆ ಒಟ್ಟು ಕೇವಲ ೧೮೯೯ ಮತದಾರರು ಮಾತ್ರವೇ ಇದ್ದಾರೆ.
ನಗರಸಭೆಗಳ ಪೈಕಿ ಅತೀ ಹೆಚ್ಚು ಎಂಬಂತೆ ಆಲಪ್ಪುಳ ನಗರಸಭೆಯಲ್ಲಿ ೬೩೦೦೯ ಗಂಡಸರು, ೬೯೬೩೦ ಮಹಿಳೆಯರು, ಇಬ್ಬರು ಮಂಗಳಮುಖಿಯರು ಸೇರಿದಂತೆ ಒಟ್ಟು ೧,೩೨,೬೪೧ ಮತದಾರರಿದ್ದಾರೆ. ಇನ್ನು ಅತೀ ಕಡಿಮೆ ಎಂಬಂತೆ ಎರ್ನಾಕುಳಂ ಜಿಲ್ಲೆಯ ಕುತ್ತಾಟ್ಟುಕುಳಂ ನಗರಸಭೆಯಲ್ಲಿ ೬೯೨೯ ಗಂಡಸರು ಮತ್ತು ೭೫೯೩ ಮಹಿಳೆಯರು ಸೇರಿದಂತೆ ಒಟ್ಟು ೧೪,೫೨೨ ಮತದಾರರಿದ್ದಾರೆ.
ಇನ್ನು ಕಾರ್ಪರೇಷನ್ (ನಗರಪಾಲಿಕೆ)ಗಳ ಪೈಕಿ ತಿರುವನಂತಪುರ ಕಾರ್ಪರೇಷನ್ನಲ್ಲಿ ೩೮೫೨೩೧ ಗಂಡಸರು, ೪೧೮೫೪೦ ಮಹಿಳೆಯರು ಮತ್ತು ೮ ಮಂದಿ ಮಂಗಳಮುಖಿ (ಟ್ರಾನ್ಸ್ ಜೆಂಡರ್) ಸೇರಿದಂತೆ ಒಟ್ಟು ೮,೦೩,೭೯೯ ಮತದಾರರಿದ್ದಾರೆ. ಇನ್ನು ಅತೀ ಕಡಿಮೆ ಮತದಾರರು ಹೊಂದಿರುವ ಕಾರ್ಪರೇಷನ್ ಕಣ್ಣೂರು ಆಗಿದೆ. ಇಲ್ಲಿ ೮೫೫೦೩ ಗಂಡಸರು, ೧,೦೨೦,೨೪ ಮಹಿಳೆಯರು ಸೇರಿದಂತೆ ಒಟ್ಟು ೧,೮೭,೫೨೭ ಮತದಾರರಿದ್ದಾರೆ.
ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿದ ಕರಡು ಮತದಾರ ಯಾದಿಯಲ್ಲಿ ರಾಜ್ಯದಲ್ಲಿ ಈಗ ೨೭.೬೭೦,೫೩೬ ಮತದಾರರಿದ್ದಾರೆ. ರಾಜ್ಯದ ಒಟ್ಟು ೯೪೧ ಗ್ರಾಮ ಪಂಚಾಯತ್ಗಳಿದ್ದು, ಅವುಗಳಲ್ಲಿ ಒಟ್ಟಾರೆಯಾಗಿ ೨೧,೫೬೩,೯೧೬ ಮತದಾರರಿದ್ದಾರೆ. ಇನ್ನು ರಾಜ್ಯದ ಒಟ್ಟು ೮೭ ನಗರಸಭೆಗಳಲ್ಲಾಗಿ ೩೬,೫೧೯,೩೧ ಮತದಾರರು ಹಾಗೂ ಆರು ಕಾರ್ಪರೇಷನ್ಗಳಲ್ಲಾಗಿ ಈಗ ೨೪,೫೪೬,೮೯ ಮತದಾರರಿದ್ದಾರೆ. ಮತದಾರ ನವೀಕರಣೆ ಪ್ರಕ್ರಿಯೆಗಳು ಈಗ ನಡೆಯುತ್ತಿರುವುದರಿಂದಾಗಿ ಅದಕ್ಕೆ ಹೊಂದಿಕೊಂಡು ಮತದಾರ ಸಂಖ್ಯೆಯಲ್ಲಿ ಮುಂದೆ ಬದಲಾವಣೆ ಉಂಟಾಗಲಿದೆ.