ಸ್ಥಳೀಯಾಡಳಿತ ಸಂಸ್ಥೆಗಳ 30 ವಾರ್ಡ್‌ಗಳಿಗೆ ಫೆ.24ರಂದು ಉಪಚುನಾವಣೆ
ತಿರುವನಂತಪುರ: ರಾಜ್ಯದ ಸ್ಥಳೀಯಾಡಳಿತ ಸಂಸ್ಥೆಗಳ 30 ವಾರ್ಡ್ಗಳಿಗಿರುವ ಉಪಚುನಾವಣೆ ಫೆ. 24ರಂದು ನಡೆಸಲು ರಾಜ್ಯ ಚುನಾವಣಾ ಆಯೋಗ ತೀರ್ಮಾನಿಸಿದೆ.
ಇದರಂತೆ ಗ್ರಾಮ ಪಂಚಾಯತ್ಗಳ 24, ನಗರಸಭೆಗಳ 3, ಬ್ಲೋಕ್ ಪಂಚಾಯತ್ 2 ಮತ್ತು ಕಾರ್ಪೋರೇಶನ್ನ 1 ವಾರ್ಡ್ಗೆ ಫೆ. 24ರಂದು ಉಪಚುನಾವಣೆ ನಡೆಯಲಿದೆ. ಫೆ. 6ರ ತನಕ ನಾಮಪತ್ರ ಸಲ್ಲಿಸಬಹುದು. ನಾಮಪತ್ರ ಹಿಂತೆಗೆದುಕೊಳ್ಳುವ ಕೊನೆಯ ದಿನಾಂಕ ಫೆ. 10 ಆಗಿದೆ. ಮತದಾನ ಫೆ. 24ರಂದು ಬೆಳಿಗ್ಗೆ 7ರಿಂದ ಸಂಜೆ 6ರ ತನಕ ನಡೆಯಲಿದೆ. ಮರುದಿನ ಮತ ಎಣಿಕೆ ನಡೆಯಲಿದೆ.