ಸ್ನೇಹದ, ಸೌಹಾರ್ದದ ಸಂದೇಶ ನೀಡಿ ಎಲ್ಲೆಡೆ ಕ್ರಿಸ್ಮಸ್ ಆಚರಣೆ
ಕಾಸರಗೋಡು: ಸೌಹಾರ್ದ ಹಾಗೂ ಸ್ನೇಹದ, ಸಂತೋಷದ ಸಂದೇಶ ನೀಡಿ ಇಂದು ಕ್ರಿಸ್ಮಸ್ ಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ. ಏಸುಕ್ರಿಸ್ತನ ಜನನವನ್ನು ಸ್ಮರಿಸಿ ವಿಶ್ವದಾದ್ಯಂತ ಜನತೆ ಇಂದು ಕ್ರಿಸ್ಮಸ್ ಆಚರಿಸುತ್ತಿದ್ದಾರೆ. ಇಗರ್ಜಿಗಳಲ್ಲಿ ನಿನ್ನೆ ರಾತ್ರಿ ಕುರ್ಬಾನ ನಡೆಯಿತು. ನಕ್ಷತ್ರಗಳು, ಗೋದಲಿಗಳನ್ನು, ಕ್ರಿಸ್ಮಸ್ ಟ್ರೀ ನಿರ್ಮಿಸಿ ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಯಿತು. ಜಿಲ್ಲೆಯ ವಿವಿಧ ಚರ್ಚ್ಗಳಲ್ಲಿ ಇಂದು ಬೆಳಿಗ್ಗಿನಿಂದ ಕ್ರಿಸ್ಮಸ್ ಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು ನಡೆಯುತ್ತಿದೆ. ಬೇಳ ಶೋಕಮಾತಾ ದೇವಾಲಯದಲ್ಲಿ ನಿನ್ನೆ ರಾತ್ರಿ ಕ್ರಿಸ್ಮಸ್ ಹಾಡುಗಳು, ಮಹಾಬಲಿಪೂಜೆ, ಮನರಂಜನಾ ಕಾರ್ಯಕ್ರಮಗಳು ಜರಗಿದೆ.