ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ದ್ವಿದಿನ ಸಂಸ್ಕೃತ ಶಿಬಿರ ಸಮಾಪ್ತಿ
ಎಡನೀರು: ಇಲ್ಲಿನ ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಜರಗಿದ ದ್ವಿದಿನ ಸಂಸ್ಕೃತ ಶಿಬಿರ ಸಮಾಪ್ತಿಗೊಂಡಿತು. ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಉದ್ಘಾಟಿಸಿದರು. ಮುಖ್ಯೋ ಪ್ಯಾಧ್ಯಾಯಿನಿ ಜ್ಯೋತಿಲಕ್ಷ್ಮಿ ಅಧ್ಯಕ್ಷತೆ ವಹಿಸಿದರು. ಶೃಂಗೇರಿ ವೇದಪಾಠ ಶಾಲೆಯ ಅಧ್ಯಾಪಕ ಗೋವಿಂದ ಭಟ್, ಸಲೀಂ ಎಡನೀರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಅಧ್ಯಾಪಕರಾದ ಅಭಿಂದನ್, ಗೋಕುಲ್ಪ್ರಸಾದ್, ರಾಮಮೋಹನ, ಕೃಷ್ಣಪ್ರಸಾದ್, ಅಜುಲ್ರಾಜ್, ಕೃಷ್ಣಪ್ರಿಯ ಶುಭಕೋರಿದರು. ಅನುರೂಪ್ ವಂದಿಸಿದರು. ನಿವೃತ್ತ ಜಿಲ್ಲಾ ಶಿಕ್ಷಣ ಅಧಿಕಾರಿ ವೇಣುಗೋಪಾಲ ಎಡನೀರು ಪ್ರಮಾಣಪತ್ರ ವಿತರಿಸಿದರು.