ಹದಗೆಟ್ಟ ರಸ್ತೆಯಲ್ಲಿ ತುಂಬಿಕೊಂಡ ಮಳೆ ನೀರು: ವಿವಿಧ ಕಡೆ ಸಂಚಾರ ಸಮಸ್ಯೆ
ಉಪ್ಪಳ: ಕಳೆದ ಎರಡು ದಿನ ಗಳಿಂದ ಅನಿರೀP್ಷತವಾಗಿ ಸುರಿದ ಮಳೆಗೆ ನೀರು ರಸ್ತೆಯಲ್ಲಿ ತುಂಬಿ ವಾಹನಗಳ ಸಂಚಾರಕ್ಕೆ ಸಮಸ್ಯೆ ಯಾಗಿರುವುದಾಗಿ ದೂರಲಾಗಿದೆ. ಹೆದ್ದಾರಿಯಿಂದ ಕೋಡಿಬೈಲು ರಸ್ತೆಗೆ ಪ್ರವೇಶಿಸುವಲ್ಲಿ ಮಳೆ ನೀರು ಕಟ್ಟಿ ನಿಂತು ಶೋಚನೀಯÁವಸ್ಥೆಯಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿದೆ. ನಡೆದು ಹೋಗುವ ಜನರ ಮೈಮೇಲೆ ಕೆಸರು ನೀರಿನ ಅಭಿಷೇಕ ಉಂಟಾಗುತ್ತಿದೆ. ನಯÁಬಜಾರ್ ಅಂಬಾರು ರಸ್ತೆ, ಪ್ರತಾಪನಗರ ಸಹಿತ ಹಲವೆಡೆ ರಸ್ತೆಗಳಲ್ಲಿ ನೀರು ತುಂಬಿ ಸಂಚಾರ ದುಸ್ತರವಾಗಿದೆ.