ಹದಿನಾಲ್ಕರ ಬಾಲಕಿಗೆ ಚುಂಬನ :ತಾಯಿಯ ಪ್ರಿಯತಮನ ವಿರುದ್ಧ ಪೋಕ್ಸೋ ಕೇಸು

ಬದಿಯಡ್ಕ: ಹದಿನಾಲ್ಕರ ಹರೆಯದ ಬಾಲಕಿಯನ್ನು ಬಿಗಿದಪ್ಪಿ ಚುಂಬಿಸಿರುವುದಾಗಿ ದೂರಲಾಗಿದೆ. ಈ ಬಗ್ಗೆ ಬಾಲಕಿ ನೀಡಿದ ದೂರಿನಂತೆ ತಾಯಿಯ ಪ್ರಿಯತಮನ ವಿರುದ್ಧ ಬದಿಯಡ್ಕ ಪೊಲೀಸರು ಪೋಕ್ಸೋ ಕೇಸು ದಾಖಲಿ ಸಿಕೊಂಡಿದ್ದಾರೆ.  ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುವ ಬಾಲಕಿ ನೀಡಿದ ದೂರಿನಂತೆ ಈ ಕ್ರಮ ಕೈಗೊಳ್ಳಲಾಗಿದೆ. ಬಾಲಕಿಯ  ತಾಯಿ ಹಾಗೂ ಓರ್ವ ಯುವಕ ಪ್ರೇಮದಲ್ಲಿದ್ದರು. ಅದನ್ನು ಬಾಲಕಿ ಹಾಗೂ ತಂದೆ ವಿರೋಧಿಸಿದ್ದರು. ಅದನ್ನು ಲೆಕ್ಕಿಸದೆ ಪ್ರಿಯತಮನನ್ನು ಮದುವೆಯಾದ ಯುವತಿ ಇತ್ತೀಚೆಗೆ ಆತನೊಂದಿಗೆ ವಾಸಸ್ಥಳಕ್ಕೆ  ಬಂದಿದ್ದಳು.  ಈ ವೇಳೆ ತಾಯಿಯ ಪ್ರಿಯತಮ ತನ್ನನ್ನು ಬಿಗಿದಪ್ಪಿ ಚುಂಬಿಸಿದನೆಂದು ಬಾಲಕಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page