ಹಳದಿ, ಪಿಂಕ್ ರೇಶನ್ ಕಾರ್ಡ್ ಮಸ್ಟರಿಂಗ್ ಮತ್ತೆ ವಿಸ್ತರಣೆ
ತಿರುವನಂತಪುರ: ಆದ್ಯತಾ ವಿಭಾಗಗಳಿಗೆ ಸೇರಿದ ಹಳದಿ ಮತ್ತು ಪಿಂಕ್ ರೇಶನ್ ಕಾರ್ಡ್ಗಳ ಸದಸ್ಯರ ಮಸ್ಟರಿಂಗ್ ಇನ್ನೂ ಮುಂದುವರಿಯ ಲಿದೆ ಎಂದು ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಜಿ.ಆರ್. ಅನಿಲ್ ತಿಳಿಸಿದ್ದಾರೆ. ನಿನ್ನೆ ಸೇರಿದ ಸಂಬಂಧ ಪಟ್ಟವರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದಲ್ಲಿ 33 ಲಕ್ಷಕ್ಕಿಂತಲೂ ಹೆಚ್ಚು ಮಂದಿ ಮಸ್ಟರಿಂಗ್ ನಡೆಸಲು ಇನ್ನೂ ಬಾಕಿ ಉಳಿದುಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ ಮಸ್ಟರಿಂಗ್ ಸಮಯವನ್ನು ಮತ್ತೆ ವಿಸ್ತರಿಸುವ ತೀರ್ಮಾನ ಸಭೆ ಕೈಗೊಂಡಿದೆ. ಎಷ್ಟರ ತನಕ ಅವಧಿ ವಿಸ್ತರಿಸಬೇ ಕೆಂಬುವುದರ ಬಗ್ಗೆ ಸರಕಾರ ಇನ್ನಷ್ಟೇ ತೀರ್ಮಾನ ಕೈಗೊಳ್ಳಲಿದೆ.