ಹಾಡಹಗಲೇ ಮನೆಯಿಂದ ಕಳವು

ಕಾಸರಗೋಡು: ಹಾಡಹಗಲೇ ಮನೆಯ ಬೀಗ ಒಡೆದು ಒಳ ನುಗ್ಗಿದ ಕಳ್ಳರು ಮೂರು ಪವನ್‌ನ ಚಿನ್ನದ ಒಡವೆ ಮತ್ತು ೧೫೦೦ ರೂ. ನಗದು ಕಳವುಗೈದಿರುವುದಾಗಿ ವಿದ್ಯಾನಗರ ಪೊಲೀಸರಿಗೆ ದೂರ ನೀಡಲಾಗಿದೆ.

ಚೆರ್ಕಳ ಸಂತೋಷ್ ನಗರದ ಹಾಜಿರಾ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಕಳವು ನಡೆಯುವ ವೇಳೆ ಮನೆಯವರು ಸಂಬಂಧಿಕರ ಮನೆಗೆ ಹೋಗಿದ್ದರು. ಅಲ್ಲಿಂದ ಹಿಂತಿರುಗುವುದರ ಮಧ್ಯೆ ಕಳವು ನಡೆದಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

You cannot copy content of this page