ಹಿಂದೂ ಆರಾಧನಾಲಯಗಳ ವಿರುದ್ಧ ಸರಕಾರದ ವಕ್ರದೃಷ್ಟಿ: ಹಿಂದೂ ಐಕ್ಯವೇದಿಯಿಂದ ಖಂಡನೆ
ಉಪ್ಪಳ: ಹಿಂದೂ ಐಕ್ಯವೇದಿ ಮಂಜೇಶ್ವರ ತಾಲೂಕು ಸಮಿತಿ ಸಭೆ ಐಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರಗಿತು. ರಾಜ್ಯ ಉತ್ತರ ವಲಯ ಸಂಘಟನಾ ಕಾರ್ಯದರ್ಶಿ ಉದಯನ್ ವಯನಾಡ್ ಉದ್ಘಾಟಿಸಿದರು. ಮಂಜೇಶ್ವರ ತಾಲೂಕು ಸಮಿತಿ ಅಧ್ಯಕ್ಷ ಸುರೇಶ್ ಶಾಂತಿಪಳ್ಳ ಅಧ್ಯಕ್ಷತೆ ವಹಿಸಿದರು.
ಐಲ ದೇವಸ್ಥಾನದ ಸ್ಥಳವನ್ನು ಕೆಲವು ಕಾರಣಗಳನ್ನು ನೀಡಿ ಜಿಲ್ಲಾಡಳಿತ ಕಬಳಿಸಲು ಪ್ರಯತ್ನಿಸುತ್ತಿದ್ದು, ಇದನ್ನು ಹಿಂದೂ ಐಕ್ಯವೇದಿ ಖಂಡಿಸುತ್ತಿದೆ. ವಿವಿಧ ಹಿಂದೂ ಆರಾಧನಾಲಯಗಳ ಭೂಮಿಯ ಮೇಲೆ ಸರಕಾರ ವಕ್ರದೃಷ್ಟಿ ಬೀರಿದ್ದು, ಯಾವುದೇ ಕಾರಣದಿಂದಲೂ ಭೂಮಿಯನ್ನು ಕಬಳಿಸಲು ಹಿಂದೂ ಐಕ್ಯವೇದಿ ಆಸ್ಪದ ನೀಡುವುದಿಲ್ಲವೆಂದು ಉದಯನ್ ವಯನಾಡ್ ನುಡಿದರು. ಐಲ ಮೈದಾನದ ಉಳಿವಿಗಾಗಿ ಭಕ್ತ ಜನ ರೊಂದಿಗೆ ಆಡಳಿತ ಸಮಿತಿ ನಡೆಸುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುವುದಾಗಿ ಐಕ್ಯವೇದಿ ತಿಳಿಸಿದೆ. ಕೋಳ್ಯೂರು ಶಂಕರನಾರಾಯಣ ದೇವಸ್ಥಾನವನ್ನು ಅಪವಿತ್ರಗೊಳಿಸಲು ಪ್ರಯತ್ನಪಟ್ಟವರನ್ನು ಪೊಲೀಸರು ಕೂಡಲೇ ಬಂಧಿಸಬೇಕು, ಇಲ್ಲದಿದ್ದಲ್ಲಿ ಹಿಂದೂಐಕ್ಯವೇದಿ ಹೋರಾಟಕ್ಕೆ ಮುಂದಾಗಲಿದೆಯೆಂದು ಅವರು ಎಚ್ಚರಿಸಿದರು.
ಮಂಜೇಶ್ವರ ತಾಲೂಕಿನ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಾಗಿ ಟ್ಟಿರುವ ಕುಂಬಳೆ ಪಂಚಾಯತ್ ಬಂಬ್ರಾಣ ಒಡ್ಡಿನಬಾಗಿಲು, ಮಂಗಲ್ಪಾಡಿ ಪಂಚಾಯತ್‌ನ ಮಣ್ಣಂಗುಳಿ ಸ್ಮಶಾನ ಗಳನ್ನು ಅನ್ಯಮತಿಯರು ಕಬಳಿಸಲು ಯತ್ನಿಸುತ್ತಿರುವುದನ್ನು ಸಭೆಯಲ್ಲಿ ಖಂಡಿಸಲಾಯಿತು. ಈ ಬಗ್ಗೆ ತಾಲೂಕು ಕೋಶಾಧಿಕಾರಿ ಸಂದೀಪ್ ಗಟ್ಟಿ ದೇವಿನಗರ ಸಭೆಯಲ್ಲಿ ಪ್ರಸ್ತಾಪಿಸಿದರು. ಕಡಲ್ಕೊರೆತದಿಂದ ಸಂಕಷ್ಟಕ್ಕೀಡಾದ ಮಂಜೇಶ್ವರ ತಾಲೂಕಿನ ಜನರಿಗೆ ಸರಕಾರ ತಕ್ಷಣ ಪರಿಹಾರ ನೀಡಲು ಮುಂದಾಗಬೇಕೆಂದು ತಾಲೂಕು ಸಮಿತಿ ಉಪಾಧ್ಯಕ್ಷ ಸುರೇಶ್ ಶೆಟ್ಟಿ ಪ್ರತಾಪನಗರ ಒತ್ತಾಯಿಸಿದರು. ಜಿಲ್ಲಾ ಅಧ್ಯಕ್ಷ ಎಸ್.ಪಿ. ಶಾಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರು, ಸಂಘಟನಾ ಕಾರ್ಯದರ್ಶಿ ಸುಧಾಕರ, ಮಹಿಳಾ ಐಕ್ಯವೇದಿ ಜಿಲ್ಲಾಧ್ಯಕ್ಷೆ ವಸಂತಿ ಕೃಷ್ಣ, ಮಂಗಲ್ಪಾಡಿ ಪಂಚಾಯತ್ ಸಮಿತಿ ಅಧ್ಯಕ್ಷ ಸುರೇಶ್, ಕುಂಬಳೆ ಪಂಚಾಯತ್ ಸಮಿತಿ ಅಧ್ಯಕ್ಷ ಸುಕುಮಾರ ಅನಂತಪುರ, ದಿನೇಶ್ ಚೆರುಗೋಳಿ, ಗಣೇಶ್ ಪ್ರತಾಪನಗರ, ಮಾಧವ ಪೆರುವಾಡ್ ಉಪಸ್ಥಿತರಿದ್ದರು. ಜಿಲ್ಲಾ ಸಂಚಾಲಕಿ ಅಶ್ವಿತಾ ಕೃಷ್ಣ ಸ್ವಾಗತಿಸಿ, ಪಂಚಾಯತ್ ಸಮಿತಿ ಕಾರ್ಯದರ್ಶಿ ಶರತ್ ಕಾರ್ಳೆ ವಂದಿಸಿದರು. ಇದಕ್ಕೂ ಮೊದಲು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿಯವರನ್ನು ಐಕ್ಯವೇದಿ ಮುಖಂಡರು ಭೇಟಿ ಯಾಗಿ ಮಾತುಕತೆ ನಡೆಸಿದರು.