ಹಿಮಾಚಲ ಪ್ರದೇಶದಲ್ಲಿ ಭೂಕಂಪ

ಸಿಮ್ಲಾ: ಹಿಮಾಚಲ ಪ್ರದೇಶದ ಲೌಹೌಲ್ ಸ್ಥಿತಿ ಜಿಲ್ಲೆಯಲ್ಲಿ ತಡರಾತ್ರಿ ಪ್ರಬಲ ಭೂಕಂಪ ಸಂಭವಿಸಿದೆ. ಭೂಕಂಪ ಶಾಸ್ತ್ರದ ರಾಷ್ಟ್ರೀಯ ಕೇಂದ್ರ ರಿಕ್ಟರ್ ಮಾಪಕದಲ್ಲಿ ೩.೪ ತೀವ್ರತೆಯಲ್ಲಿ  ಭೂಕಂಪ ಸಂಭವಿಸಿದೆಯೆಂದು ಹೇಳಿದೆ. ಲೌಹೌಲ್ ಸ್ಥಿತಿಯಲ್ಲಿ ಕಂಪನದಿಂದಾಗಿ ಇದ್ದಕ್ಕಿದ್ದಂತೆ ರಾತ್ರಿ ಮನೆಗಳು ನಡುಗಲಾರಂಭಿಸಿದವು. ಜನರು ಭಯಭೀತರಾಗಿ ಮನೆಯಿಂದ ಹೊರ ಓಡಿದ್ದಾರೆ.  ಭಾರತೀಯ ಕಾಲಮಾನ ಪ್ರಕಾರ ನಿನ್ನೆ ರಾತ್ರಿ ೧೧.೨೦ಕ್ಕೆ  ೧೧ ಸೆಕೆಂಡು ಕಂಪನದ ಅನುಭವವಾಗಿದೆ. ಆದರೆ ಇದರಿಂದ ಯಾವುದೇ ರೀತಿಯ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿ ಸಂಭವಿಸಿಲ್ಲವೆಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮುನ್ನ ಕಂಗ್ರಾ, ರೆಸ್ನೌರ್ ಮತ್ತು ಇತರ ಜಿಲ್ಲೆಗಳಲ್ಲಿ ೫.೪ ತೀವ್ರತೆಯಲ್ಲಿ  ಭೂಕಂಪ ಸಂಭವಿಸಿತ್ತು.

Leave a Reply

Your email address will not be published. Required fields are marked *

You cannot copy content of this page