ಹಿರಿಯ ಬಟ್ಟೆ ವ್ಯಾಪಾರಿ ನಿಧನ
ಕಾಸರಗೋಡು: ನಗರದ ಹಿರಿಯ ಬಟ್ಟೆ ವ್ಯಾಪಾರಿಯಾಗಿದ್ದ ತಳಂಗರೆ ಕಡವತ್ ಫೋರ್ಟ್ ರೋಡ್‌ನ ಗಾರ್ಡನ್‌ನ ಟಿ.ಎ. ಸೈನುದ್ದೀನ್ (90) ನಿಧನ ಹೊಂದಿದರು. ರೋಯಲ್ ಗಾರ್ಮೆಂಟ್ಸ್ ಸಂಸ್ಥೆಯ ಮಾಲಕರಾಗಿದ್ದರು. ಟೌನ್ ಅಸನತ್ತುಲ್ ಜಾರಿಯಾ ಜುಮಾ ಮಸೀದಿ ಪದಾಧಿಕಾರಿಯಾಗಿದ್ದರು. ಮೃತರು ಪತ್ನಿ ಆಮಿನ, ಮಕ್ಕಳಾದ ಫಿರೋಸ್, ಫೈಸಲ್, ಖೈರುನ್ನೀಸ, ಸರೀನ, ಶಮೀಮ, ಸಾಯಿರಾಬಾನು, ಸಫುರ, ಅಳಿಯಂದಿರಾದ ಜಮಾಲುದ್ದೀನ್ ಫೋರ್ಟ್‌ರೋಡ್, ಜಲಾಲ್ ವಿದ್ಯಾನಗರ, ಅಬ್ದು ಮಂಗಳೂರು, ಸುಲೈಮಾನ್ ಕಳನಾಡು, ಸಿ.ಎಲ್, ಮುನೀರ್ ಚೆಮ್ನಾಡ್, ಸೊಸೆಯಂದಿ ರಾದ ಫೌಸಿಯಾ ಬೆಂಡಿಚ್ಚಾಲ್, ಫಸೀನ ಬೆಂಡಿಚ್ಚಾಲ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.