ಬಸ್‌ನಲ್ಲಿ ಸಾಗಿಸುತ್ತಿದ್ದ ಮದ್ಯ ವಶ: ಓರ್ವಸೆರೆ

ಮುಳ್ಳೇರಿಯ: ಬಸ್‌ನಲ್ಲಿ ಸಾಗಿಸುತ್ತಿದ್ದ ೪೮ ಪ್ಯಾಕೆಟ್ (8.64 ಲೀಟರ್) ಕರ್ನಾಟಕ ಮದ್ಯವನ್ನು ಆದೂರು ಅಬಕಾರಿ ಚೆಕ್‌ಪೋಸ್ಟ್ ನಲ್ಲಿ ವಶಪಡಿಸಲಾಗಿದೆ. ಈ ಸಂಬಂಧ ತಮಿಳುನಾಡು ಜಮುನ ಮರತ್ತೂರು ತಾಲೂಕಿನ ವಾಂಕನ್ನೂರು ಎಂಬಲ್ಲಿನ ಜಯಶಂಕರ್ (23) ಎಂಬಾತನನ್ನು ಬಂಧಿಸಲಾಗಿದೆ.  ನಿನ್ನೆ ರಾತ್ರಿ 8 ಗಂಟೆ ವೇಳೆ ಸುಳ್ಯದಿಂದ ಕಾಸರಗೋಡಿಗೆ ಬರುತ್ತಿದ್ದ ಕೇರಳ ರಾಜ್ಯ ಸಾರಿಗೆ ಬಸ್‌ನಲ್ಲಿ ಚೆಕ್‌ಪೋಸ್ಟ್  ಅಧಿಕಾರಿಗಳು ತಪಾ ಸಣೆ ನಡೆಸಿದಾಗ ಮದ್ಯ ಪತ್ತೆಯಾ ಗಿದೆ. ಶೋಲ್ಡರ್‌ಬ್ಯಾಗ್‌ನಲ್ಲಿ ಮದ್ಯ ತುಂಬಿಸಿ ಆರೋಪಿ ಕೈವಶವಿರಿಸಿ ಕೊಂಡಿದ್ದಾ ನೆನ್ನಲಾಗಿದೆ. ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ರಿ. ರಾಜೀವನ್  ನೇತೃತ್ವದಲ್ಲಿ ಪ್ರಿವೆಂಟಿವ್ ಆಫೀಸರ್ ಅಪ್ಸಲ್  ಕೆ ಮೊದಲಾದವರು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದೆ.

You cannot copy contents of this page