ಹಿರಿಯ ವ್ಯಾಪಾರಿ ನಿಧನ
ಮಂಜೇಶ್ವರ: ಮಂಜೇಶ್ವರ ಚೌಕಿ ನಿವಾಸಿ, ಹಿರಿಯ ವ್ಯಾಪಾರಿ ಆನಂದ (66) ನಿಧನರಾದರು. ನಿನ್ನೆ ಸಂಜೆ ಸುಮಾರು 5.30ರ ವೇಳೆ ಮನೆಯಲ್ಲಿ ಹೃದಯಾಘಾತ ಉಂಟಾಗಿದ್ದು, ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಸಾಗಿಸುವ ಮಧ್ಯೆ ನಿಧನರಾದರು.ಮ ನೆಯ ಬಳಿಯಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದರು. ಮೃತರು ಪತ್ನಿ ಶಶಿಕಲಾ, ಮಕ್ಕಳಾದ ಅಕ್ಷಯ್, ಅಕ್ಷತಾ, ಅಳಿಯ ನಿತಿನ್, ಸೊಸೆ ಅಕ್ಷತಾ, ಸಹೋದರರಾದ ಸಂಜೀವ, ವಿಶ್ವನಾಥ ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ತಂದೆ ಐತ್ತಪ್ಪ ಮಾಸ್ತರ್, ತಾಯಿ ಕಮಲ ಈ ಹಿಂದೆ ನಿಧನರಾಗಿದ್ದಾರೆ.