ಹುಟ್ಟಿನಿಂದಲೇ ಶಯ್ಯಾವಸ್ಥೆಯಲ್ಲಾದ ಬಾಲಕ ನಿಧನ

ಕಾಸರಗೋಡು: 16 ವರ್ಷ ದಿಂದ ಸಂಕಷ್ಟ ಜೀವನ ನಡೆಸುತ್ತಿದ್ದ ಶಹಾನ್ ರಿಯಾಸ್ ಅಬ್ದುಲ್ಲ (16) ನೋವಿಲ್ಲದ ಲೋಕಕ್ಕೆ ಪ್ರಯಾಣಿಸಿ ದನು. ರಾಜ್ಯ ಸರಕಾರದ ಎಂಡೋಸ ಲ್ಫಾನ್ ಸಂತ್ರಸ್ತ ಬಾಧಿತರ ಯಾದಿ ಯಲ್ಲಿ ಹೆಸರಿರುವ ಬಾಲಕನಾಗಿದ್ದಾನೆ ಪರಪ್ಪ ಬಾನಂ ರಸ್ತೆ ಬಳಿಯ ನಿವಾಸಿ ರಿಯಾಸ್- ರುಖಿಯಾ ದಂಪತಿ ಪುತ್ರ ಶಹಾನ್ ರಿಯಾಸ್. 16 ವರ್ಷವಾದರೂ ಜೀವನದಲ್ಲಿ ಒಮ್ಮೆ ಕೂಡಾ ನಡೆದಾಡಲು, ಎದ್ದು ನಿಲ್ಲಲು ಸಾಧ್ಯವಾಗದ ಈ ಬಾಲಕ ಸಂಕಷ್ಟ ಜೀವನ ನಡೆಸುತ್ತಿದ್ದನು. ನಿನ್ನೆ ಸಂಜೆ ತೀವ್ರ ಉಸಿರಾಟ ತೊಂದರೆ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ.

ವೆಳ್ಳರಿಕುಂಡ್ ಪೊಲೀಸರು ಕೇಸು ದಾಖಲಿಸಿದ್ದಾರೆ. ಮೃತ ಬಾಲಕ ತಂದೆ, ತಾಯಿ, ಸಹೋದರಿ -ಸಹೋದರರಾದ ಶಾನಿಬ, ಆಲಿಕಿನ್ನೂರ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾನೆ.

Leave a Reply

Your email address will not be published. Required fields are marked *

You cannot copy content of this page